ಕುಶಾಲನಗರ, ಜೂ 21:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಸೋಮವಾರಪೇಟೆ ತಾಲೂಕು ಕುಶಾಲನಗರ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕುಶಾಲನಗರದಲ್ಲಿರುವ
ಜಿಲ್ಲಾ ಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು.
ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ
ಯೋಜನೆಯ
ಜಿಲ್ಲಾ ನಿರ್ದೇಶಕ ವಿಠಲ ಸಾಲ್ಯಾನ್ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ, ಕ್ರಿಯಾಯೋಜನೆಗಳ ಬಗ್ಗೆ ವಿವರಿಸಿದರು.
ಪದಾಧಿಕಾರಿಗಳ ನಾಯಕತ್ವ ಗುಣ, ಯೋಜನೆಯ ಕಾರ್ಯಕ್ರಮಗಳಾದ ಮಾಶಾಸನ, ಸುಜ್ಞಾನಿಧಿ ಶಿಷ್ಯವೇತನ , ಜನಮಂಗಲ ಕಾರ್ಯಕ್ರಮ,ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಶ್ರದ್ಧಾ ಕೇಂದ್ರ ನಿರ್ಮಾಣಕ್ಕೆ ಹಾಲು ಡೈರಿ ಕಟ್ಟಡ ರಚನೆ, ಹಿಂದೂ ರುದ್ರ ಭೂಮಿ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಹೂಳೆತ್ತುವ ಕಾರ್ಯಕ್ರಮ , ಸಾಮಾಜಿಕ ಅರಣ್ಯೀಕರಣ ಹೀಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಹಲವು ಸಮಾಜಮುಖಿ ಅನುದಾನಿತ ಕಾರ್ಯಕ್ರಮದ ಬಗ್ಗೆ ಒಕ್ಕೂಟದ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು.
ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮಾತನಾಡಿ, ಪದಾಧಿಕಾರಿಗಳು ಸಂಘ ಭೇಟಿ ಮಾಡುವ ಸಂದರ್ಭ ಪರಿಶೀಲನೆ ಮಾಡಬೇಕಾದ ದಾಖಲಾತಿಗಳ ಬಗ್ಗೆ, ಒಕ್ಕೂಟದಲ್ಲಿ ಉತ್ತಮ ನಾಯಕನಾಗಿ ಮೂಡಿಬರಲು ಇರಬೇಕಾದ ಗುಣಲಕ್ಷಣಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಜಿಲ್ಲಾ ಎಂಐಎಸ್ ಯೋಜನಾಧಿಕಾರಿ ಪ್ರವೀಣ್ ಮಾತನಾಡಿ, ಬ್ಯಾಂಕಿಂಗ್ ಸೇವೆಗಳ ಬಗ್ಗೆ ಸ್ವಸಹಾಯ ಸಂಘ ಬ್ಯಾಂಕಿನಲ್ಲಿ ಖಾತೆ ನಿರ್ವಹಣೆಯಾಗುವುದರ ಬಗ್ಗೆ, ಸಾಲ ವಿತರಣೆ, ಉಳಿತಾಯ, ಬಡ್ಡಿ ದರ ಲೆಕ್ಕಾಚಾರ, ಸಾಲ ಮರುಪಾವತಿ ಚೀಟಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಮೇಲ್ವಿಚಾರಕಿ ಪವಿತ್ರಾಕ್ಷಿ ಒಕ್ಕೂಟ ಸಭೆಯ ನಿರ್ವಹಣೆ ಮಾಡುವುದರ ಬಗ್ಗೆ ಹಾಗೂ ಆಂತರಿಕ ಲೆಕ್ಕಪರಿಶೋಧಕಿ ರೂಪ ಅವರು, ಸಂಘಗಳ ಗ್ರೇಡಿಂಗ್ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಅನುದಾನಗಳ ಬಗ್ಗೆ ಕೃಷಿ ಮೇಲ್ವಿಚಾರಕ ಸ್ವಾಮಿ ಮಾಹಿತಿ ನೀಡಿದರು. ಕುಶಾಲನಗರ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು. ವಲಯದ ಎಲ್ಲಾ ಸೇವಾ ಪ್ರತಿನಿಧಿಯವರು ಹಾಗೂ ಒಕ್ಕೂಟ ಪದಾಧಿಕಾರಿಗಳು ಈ ತರಬೇತಿಯಲ್ಲಿ ಭಾಗವಹಿಸಿದ್ದರು.
Back to top button
error: Content is protected !!