ಕೂಡಿಗೆ. ಜೂ. 18: ಕನ್ನಡ ಸಿರಿ ಸ್ನೇಹ ಬಳಗದ ಸದಸ್ಯರು ಕೂಡಿಗೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹಂಡ್ರಂಗಿ ನಾಗರಾಜ್ ರವರು ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕಣಿವೆ ಸಾಹಿತಿ ಭಾರದ್ವಾಜ್ ಆನಂದ ತೀರ್ಥ, ರೋಟರಿ ಸಂಸ್ಥೆಯ ಸಹಾಯಕ ರಾಜ್ಯಪಾಲ ಎಂ.ಡಿ.ರಂಗಸ್ವಾಮಿ, ಕಾಲೇಜಿನ ನಿಕಟಪೂರ್ವ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ನಿವೃತ್ತ ಕಲಾ ಶಿಕ್ಷಕ ಉ. ರಾ. ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಅಧಿಕಾರಿ ಮಣಜೂರು ಮಂಜುನಾಥ, ಕೂಡಿಗೆ ಕ್ಲಸ್ಟರ್ ವಿಭಾಗದ ಸಿ.ಆರ್.ಪಿ. ಶಾಂತಕುಮಾರ್, ಉಪನ್ಯಾಸಕರಾದ ರಮೇಶ್, ಹನುಮರಾಜ್, ಸೇರಿದಂತೆ ಉಪನ್ಯಾಸಕ ವೃಂದದವರು ಇದ್ದರು.
Back to top button
error: Content is protected !!