ಸುದ್ದಿಗೋಷ್ಠಿ

ಶೀಘ್ರದಲ್ಲೇ ಕುಶಾಲನಗರದಲ್ಲಿ ಡಿ.ಆರ್. ಸಿ. ಸಿನಿಮಾಸ್ ಶುಭಾರಂಭ

ಕುಶಾಲನಗರ, ಜೂ 11: ಕುಶಾಲನಗರದಲ್ಲಿ ಶೀಘ್ರದಲ್ಲೇ ಡಿ ಆರ್ ಸಿ ಮಲ್ಟಿಪ್ಲೆಕ್ಸ್ ಥಿಯೇಟರ್ ಶುಭಾರಂಭಗೊಳ್ಳಲಿದೆ ಎಂದು ಡಿ ಆರ್ ಸಿ ಮೇನೇಜಿಂಗ್ ಡೈರೆಕ್ಟರ್ ಗಳಾದ ಹನುಮಂತು ಮತ್ತು ವೈಶಾಲಿ ಹನುಮಂತು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊಡಗಿನಲ್ಲಿ ಥಿಯೇಟರ್ ಕೊರತೆಯನ್ನು ಡಿ ಆರ್ ಸಿ  ನೀಗಿಸಲಿದೆ. ಕುಶಾಲನಗರ ತಾವರೆಕರೆ ಮುಂಭಾಗದ ಕಾಂಪ್ಲೆಕ್ಸ್ ಲ್ಲಿ ಪ್ರತ್ಯೇಕ ಮೂರು ಸ್ಕ್ರೀನ್ ಗಳನ್ನು ಒಳಗೊಂಡ ಸುಸಜ್ಜಿತ ಎಸಿ ಥಿಯೇಟರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.‌ ಕೆಲವು ಅಗತ್ಯ ಅನುಮತಿ ದೊರೆತ ಬಳಿಕ ಮುಂದಿನ‌ ವಾರದಿಂದ ಥಿಯೇಟರ್ ಕಾರ್ಯಾರಂಭ ಮಾಡಲಿದೆ. ಎಲ್ಲಾ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುವ ಥಿಯೇಟರ್ ಕೊಡಗು-ಮೈಸೂರು ಭಾಗದ ಸಿನಿಪ್ರಿಯರಿಗೆ ಮುಂದೊಂದು ವಾರದಲ್ಲಿ ರಸದೌತಣ ನೀಡಲಿದೆ ಎಂದು ತಿಳಿಸಲು ಹರ್ಷಿಸುತ್ತೇವೆ ಎಂದರು.

ಥಿಯೇಟರ್ ಸ್ಥಾಪನೆ ಮೂಲಕ ಸ್ಥಳೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಎಕ್ಸಿಕ್ಯೂಟಿವ್ ಕೃಷ್ಣ, ಫ್ಲೋರ್ ಮೇನೇಜರ್ ರಾಘವೇಂದ, ಇಂಜಿನಿಯರ್ ಹಾಲೇಶ್, ವ್ಯವಸ್ಥಾಪಕ ಮರ್ವಿನ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!