ಕುಶಾಲನಗರ, ಏ 29:ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಸಿಂಕೋನದಿಂದ ಮಕ್ಕಂದೂರು ಕಡಗೆ ಹೋಗುವ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸರಬರಾಜು ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಿ: 28-04-2026 ರಂದು ದಾಳಿ ನಡೆಸಿ ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಮಡಿಕೇರಿ ಗ್ರಾಮಾಂತರ ಪೊ.ಕಾ ಮೊ.ಸಂ:73/2026, ಕಲಂ:20(b)(ii)(A) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ 03 ಜನ ಆರೋಪಿಗಳನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಆರೋಪಿಗಳ ವಿವರ:
1. ಜಾಬೀರ್, 21 ವರ್ಷ, ಲೋರಟು, ಬಂಟ್ವಾಳ ತಾ|| ದಕ್ಷಿಣ ಕನ್ನಡ ಜಿಲ್ಲೆ.
2. ಸುಲ್ತಾನ್ ಪ್ರಧಾನ್, 55 ವರ್ಷ, ಕಳಿಂಗ ಗ್ರಾಮ, ಕಂದನಮಾಲ್ ಜಿಲ್ಲೆ, ಒರಿಸ್ಸಾ ರಾಜ್ಯ,
3. ಸ್ವರ್ಣಲತಾ ನಾಯಕ್, 35 ವರ್ಷ, ಮಂದಿನಂಜು ಗ್ರಾಮ, ಕಂದನಮಾಲ್ ಜಿಲ್ಲೆ, ಒರಿಸ್ಸಾ ರಾಜ್ಯ
ವಶಪಡಿಸಿಕೊಂಡ ಸ್ವತ್ತುಗಳ ವಿವರ
1. 15 ಕೆಜಿ 903 ಗ್ರಾಂ ಗಾಂಜಾ
2. 03 ಮೊಬೈಲ್‌ಗಳು.
Back to top button
error: Content is protected !!