ಕಾರ್ಯಕ್ರಮ

ಕೂಡಿಗೆಯಲ್ಲಿ ನಡೆದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ

ಕುಶಾಲನಗರ, ಏ. 29: ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕಂಪಾನಿಯೋ ಇವರ ಸಹಯೋಗದೊಂದಿಗೆ ಉಚಿತ ‌ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರವು ಸಹಕಾರ ಸಂಘದ ಸಭಾಂಗಣದಲ್ಲಿ ಆರಂಭಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ‌. ಹೇಮೇಂತ್ ಕುಮಾರ್ ನೆರವೇರಿಸಿದರು. ನಂತರ ಮಾತಾನಾಡುತ್ತಾ ಅರೋಗ್ಯವೇ ಭಾಗ್ಯ ಎಂಬ ನಾಡುನಡಿಯಂತೆ ಗ್ರಾಮೀಣ ಪ್ರದೇಶದ ರೈತರು ತಮ್ಮ ಅರೋಗ್ಯ ಕಡೆ ಹೆಚ್ಚು ಗಮನ ಹರಿಸಲು ಇಂತಹ ಉಚಿತ ಚಿಕಿತ್ಸೆ ಶಿಬಿರಗಳು ಉಪಯುಕ್ತವಾಗುತ್ತೇವೆ ಇದರ ಸದುಪಯೋಗವನ್ನು ರೈತರು ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಂಪಾನಿಯೋ ಕಂಪನಿಯ ಥೆರಪಿಸ್ಟ್ ಶಶಿಕುಮಾರ್ ಪೂಜಾರ್ ಮಾತಾನಾಡುತ್ತಾ ಯಾವುದೇ ಔಷಧವಿಲ್ಲದೇ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಉಚಿತ ಥೆರಪಿಯ ಮೂಲಕ ತಮ್ಮ ಆರೋಗ್ಯ ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ. ಈ ಉಪಕರಣ ಪ್ರತಿದಿನ ಕೇವಲ 30. ನಿಮಿಷಗಳ ಕಾಲ ಉಪಯೋಗಿಸುವುದರಿಂದ ನಮ್ಮ ಪಾದದಲ್ಲಿರುವ ಎಲ್ಲಾ ಆಕ್ಯುಫ್ರೇಶರ್ ಪಾಯಿಂಟ್ ಗಳನ್ನು ಸಕ್ರಿಯ ಗೊಳಿಸಿ, ಮಾಂಸಖಂಡ ಹಾಗೂ ನರಗಳನ್ನು ಉತ್ತೇಜಿಸಿ, ನಮ್ಮ ದೇಹದ ಎಲ್ಲಾ ಅಂಗಾಂಶಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಸಂಚಾರವನ್ನು ಮಾಡಲು ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ರೈತರಿಗೆ ,ಸಾರ್ವಜನಿಕರಿಗೆ ತಿಳಿಸಿದರು ‌
ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಕೆ.ಪಿ. ರಾಜು ಎಸ್. ಎಸ್. ಕೃಷ್ಣ, ರಮೇಶ್, ನಾಗರಾಜ್, ರಾಮಚಂದ್ರ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮಂಜಯ್ಯ , ನಾಗರಾಜ್, ಮುಖ್ಯ ಕಾರ್ಯನಿರ್ವರ್ಣಾಧಿಕಾರಿ ಕೆ.ಪಿ. ಹರ್ಷ ಸೇರಿದಂತೆ ನೂರಾರು ರೈತರು ಭಾಗವಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!