ಕುಶಾಲನಗರ, ಏ 27: ಕುಶಾಲನಗರದ ಆರ್ಯ ವೈಶ್ಯ ಮಂಡಳಿ ವತಿಯಿಂದ ವಾಸವಿ ಜಯಂತಿ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ವಾಸವಿ ಸುಪ್ರಭಾತ ದೊಂದಿಗೆ ವಾಸವಿ ಜಯಂತಿಯ ಪೂಜಾ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯ ಕಾವೇರಿ ನದಿಯಿಂದ ಕನ್ನಿಕೆಯರು ಕಳಸವನ್ನು ತಂದ ಬಳಿಕ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಮಹಾ ಸಂಕಲ್ಪ, ಅಭಿಷೇಕ, ಮಹಾಮಂಗಳಾರತಿ, ಕಳಸ ಸ್ಥಾಪನೆ, ವಾಸವಿ ಹೋಮ, ಪೂರ್ಣಾಹುತಿ ನೆರವೇರಿಸಲಾಯಿತು. ಸಂಜೆ ಕೇರಳದ ಪ್ರಸಿದ್ಧ ಚಂಡಿವಾದ್ಯದೊಂದಿಗೆ ಬೆಳ್ಳಿರಥದಲ್ಲಿ ವಾಸವಿ ಅಮ್ಮನ ಮೂರ್ತಿಯ ಮೆರವಣಿಗೆ ನಡೆಯಿತು.
ಈ ಸಂದರ್ಭ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಕಾರ್ಯದರ್ಶಿ ಕೆ ಪ್ರವೀಣ್, ಉಪಾಧ್ಯಕ್ಷ ಬಿ.ಎಲ್. ಅಶೋಕ್, ಖಜಾಂಜಿ ಪಿ.
ಎಸ್. ಪ್ರಶಾಂತ್, ನಿರ್ದೇಶಕರಾದ ವಿ ವೈಶಾಖ್, ಕೆ.ಜೆ. ಸತೀಶ್, ಎ.ಎಸ್. ಕುಮಾರ್, ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಜೆ. ಬಾಲಾಜಿ, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಅನುಷಾ ಅರ್ಜುನ್, ವಾಸವಿ ಬಾಲಕಿಯರ ಸಂಘದ ಅಧ್ಯಕ್ಷೆ ಸಾನ್ವಿ ಕೆ ಪಿ, ವಾಸವಿ ಬಾಲಕರ ಸಂಘದ ಅಧ್ಯಕ್ಷ ಶಿಶಿರ್ ಪಿ.ಡಿ ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
Back to top button
error: Content is protected !!