ಅವ್ಯವಸ್ಥೆ

ನಿಯಮ‌‌ ಉಲ್ಲಂಘನೆ: ಕುಶಾಲನಗರದಲ್ಲಿ ಹಲವು ಟಿಪ್ಪರ್, ಟ್ರಾಕ್ಟರ್ ಗಳ ವಿರುದ್ದ ಪ್ರಕರಣ

ಕುಶಾಲನಗರ, ಏ 16: ಕುಶಾಲನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ರಸ್ತೆಯಲ್ಲಿ ಜಲ್ಲಿಕಲ್ಲು ತುಂಬಿದ ವಾಹನಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು, ಪರವಾನಿಗೆಯ ನಿಯಮವನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ಹಾಗೂ ಇತರೆ ವಾಹನಗಳಿಗೆ ತೊಂದರೆಯಾಗದಂತೆ ಮುಂಜಾಗೃತ ಕ್ರಮ ಕೈಗೊಳ್ಳದೇ ರಸ್ತೆಯಲ್ಲಿ ಜಲ್ಲಿಕಲ್ಲು ಚಲ್ಲಿಕೊಂಡು ಚಾಲನೆ ಮಾಡಿ ರಸ್ತೆಯಲ್ಲಿ ಸಂಚಾರಿಸುವ ವಾಹನ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ಬಗ್ಗೆ ದೂರು ಸ್ವೀಕರಿಸಿದ್ದು,  ಗಣೇಶ್, ಪಿಎಸ್‌ಐ &  ಶ್ರೀನಿವಾಸ್, ಪಿಎಸ್‌ಐ, ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ಈ ಕೆಳಕಂಡ ವಾಹನಗಳನ್ನು ಪತ್ತೆ ಹಚ್ಚಿ ಮೊ.ಸಂ: 29/2026, 30/2026 ಮತ್ತು 31/2026 ಕಲಂ: 281 ಬಿಎನ್ಎಸ್ & 177 ಐಎಂವಿ ಆಕ್ಟ್ ಅಡಿಯಲ್ಲಿ 03 ಪತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ವಶಪಡಿಸಿಕೊಂಡ ವಾಹನಗಳ ವಿವರ;

1. ಕೆಎ-12ಸಿ-1319ರ ನೊಂದಣಿ ಸಂಖ್ಯೆಯ ಭಾರತ್ ಬೆಂಜ್ ಕಂಪನಿಯ ಟಿಪ್ಪರ್

2. ಕೆಎ-12ಬಿ-1480ರ ನೊಂದಣಿ ಸಂಖ್ಯೆಯ ಟಿಪ್ಪರ್

3. ಕೆಎ-51ಡಿ-2407ರ ನೊಂದಣಿ ಸಂಖ್ಯೆಯ ಟಿಪ್ಪರ್

ಪತ್ತೆ ಹಚ್ಚಿ ಮೋಟಾರ್ ವಾಹನ ಕಾಯಿದೆ ಉಲ್ಲಂಘನೆ ಅಡಿಯಲ್ಲಿ ದಂಡ ವಿಧಿಸಿದ ವಾಹನಗಳ ವಿವರ;

1.ಕೆಎ-12ಸಿ-3452 ರ ಟಿಪ್ಪರ್.

2. ಕೆಎ-12ಬಿ-8366 ರ ಟಿಪ್ಪರ್.

3. ಕೆಎ-12ಸಿ-5021ರ ಟಿಪ್ಪರ್.

4. ಕೆಎ-12ಸಿ-6608ರ ಟಿಪ್ಪರ್.

5. ಕೆಎ-86 ಬಿ-1752 ರ ಟಿಪ್ಪರ್.

6. ಕೆಎ-12ಸಿ-5084ರ ಟಿಪ್ಪರ್

7.ಕೆಎ.13ಟಿಸಿ-0312 ರ ಟ್ರಾಕ್ಟರ್

Related Articles

Leave a Reply

Your email address will not be published. Required fields are marked *

Back to top button
error: Content is protected !!