ಸಭೆ

ಕುಶಾಲನಗರ ನಾಡಪ್ರಭು ಪತ್ತಿನ‌ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ

ಸಂಘದ ಅಧ್ಯಕ್ಷರಾದ ಎಂ.ಕೆ.ದಿನೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕುಶಾಲನಗರ, ಆ 28:ನಂ .38185 ನೇ ಕುಶಾಲನಗರ ನಾಡಪ್ರಭು ಪತ್ತಿನ‌ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಎಂ.ಕೆ.ದಿನೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಾರಂಭದಲ್ಲಿ ಮೃತ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು. ಕಳೆದ ಮಹಾಸಭೆ ವರದಿ, 2021-22ನೇ ಸಾಲಿನ ಲೆಕ್ಕಪರಿಶೋಧನಾ ವರದಿ, ಜಮಾ ಖರ್ಚು, ಲಾಭ ನಷ್ಟದ, ಆಸ್ತಿ ತಃಖ್ತೆ ಪರಿಶೀಲಿಸಿ ಅಂಗೀಕರಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಘದ 2021-22ನೇ ಸಾಲಿನ ಆಡಳಿತ ಮಂಡಳಿ ವರದಿ ವಾಚಿಸಿದರು.
ಮುಂಬರುವ ದಿನಗಳಲ್ಲಿ ಸದಸ್ಯರಿಗೆ ಒದಗಿಸಲು ಚಿಂತಿಸಿರುವ ವಿವಿಧ ರೂಪದ ಸಾಲ ಸೌಲಭ್ಯಗಳ ಬಗ್ಗೆ ನಿರ್ದೇಶಕರಾದ ಸಿ.ವಿ.ನಾಗೇಶ್ ಸಭೆಗೆ ಮಾಹಿತಿ ನೀಡಿದರು.
21-22ನೇ ಸಾಲಿನ ನಿವ್ವಳ‌ ಲಾಭದ ವಿಲೇವಾರಿ ಮಂಜೂರಾತಿ, ಬಡ್ಜೆಟ್ ಗಿಂತ ಹೆಚ್ಚಿನ ಖರ್ಚು ಮಂಜೂರಾತಿ, 22-23ನೇ ಸಾಲಿನ ಅಂದಾಜು ಬಡ್ಜೆಟ್ ಮಂಜೂರು, ಲೆಕ್ಕಪರಿಶೋಧಕರ ನೇಮಕಾತಿ, ಸಿಬ್ಬಂದಿ‌ ನೇಮಕಾತಿ, ಸಂಘದ‌ ಕಾರ್ಯಚಟುವಟಿಕೆಗಳ ಕಾರ್ಯಕ್ರಮಗಳ ಅನುಮೋದನೆ ಬಗ್ಗೆ ಚರ್ಚೆ ನಡೆಯಿತು.
ಇದೇ ಸಂದರ್ಭ ಸೇವೆಯಿಂದ ವಿಮುಕ್ತರಾದ ಸಂಘದ ಸಿಬ್ಬಂದಿ ಪೂರ್ಣಿಮ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಂಘದ ಆಯ್ದ ಉತ್ತಮ‌ ಸದಸ್ಯರನ್ನು ಗುರುತಿಸಿ ಅಭಿನಂದಿಸಲಾಯಿತು.
ಅಧ್ಯಕ್ಷೀಯ ಭಾಷಣ ಮಾಡಿದ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್, ಸಂಘದ ಅಭಿವೃದ್ದಿಯಲ್ಲಿ ಆಡಳಿತ ಮಂಡಳಿ ಹಾಗೂ ಸದಸ್ಯ ಪಾತ್ರ ಅತಿ‌ ಮುಖ್ಯ. ಸಂಘದ ಸದಸ್ಯತ್ವ ಹೆಚ್ಚಿಸುವ ಮತ್ತು ಸ್ವಂತ ಕಟ್ಟಡ‌ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ಕೋರಿದರು.
ಸಂಘದ ಉಪಾಧ್ಯಕ್ಷರಾದ ಜಿ.ಬಿ.ಜಗದೀಶ್, ನಿರ್ದೇಶಕರಾದ ಸಿ.ವಿ.ನಾಗೇಶ್, ಕೆ.ಪಿ.ರಾಜು, ಎಸ್.ಸಿ.ಪ್ರಕಾಶ್, ಎಂ.ಡಿ.ರವಿಕುಮಾರ್, ಕೆ.ಕೆ.ಹೇಮ್ ಕುಮಾರ್, ಕೆ.ಆರ್.ಕಸ್ತೂರಿ, ರೇಖಾ, ಎಂ.ಡಿ.ರಮೇಶ್, ವ್ಯವಸ್ಥಾಪಕಿ ತುಳಸಿ ಸೇರಿದಂತೆ ಕಾನೂನು ಸಲಹೆಗಾರ ಮತ್ತು ಲೆಕ್ಕಪರಿಶೋಧಕರಾದ ಶಿವಮೂರ್ತಿ ಹಾಗೂ ಚಂದ್ರಶೇಖರ್ ಸೇರಿದಂತೆ ಸದಸ್ಯರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!