ಅಪಘಾತ

ಗುರುವಾರ ಹುಟ್ಟುಹಬ್ಬ ಆಚರಣೆ, ಮರುದಿನ ಅಪಘಾತದಲ್ಲಿ‌ ನಿಧನ

ಕುಶಾಲನಗರ, ‌ಮಾ 13: ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ

ಕುಶಾಲನಗರ ಪದವಿ ಪೂರ್ವ ಕಾಲೇಜಿ ನ ದ್ವಿತೀಯ ಪಿ.ಯಸಿ. ವಿದ್ಯಾರ್ಥಿ ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದ ಶ್ರೀನಿವಾಸ್ ಎಂಬವರ ಪುತ್ರ ಸುಮಂತ್ (18) ಮೃತ ದುರ್ದೈವಿ. ಕುಶಾಲನಗರದಲ್ಲಿ ಪರೀಕ್ಷೆಗೆ ಹಾಜರಾಗಲು ಬರುತ್ತಿದ್ದ ಸಂದರ್ಭ ನವಿಲೂರು ಬಳಿ ಬೈಕ್ ಗಳ ಮುಖಾಮುಖಿ ಅಪಘಾತದಲ್ಲಿ ಸಮಂತ್ ಮೃತಪಟ್ಟಿದ್ದಾರೆ.
ಗುರುವಾರ‌ ಮೃತ ಸುಮಂತ್ ತನ್ನ 18ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಎನ್ನಲಾಗಿದೆ.
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಯಿತು. ಮತ್ತೊಂದು ದ್ವಿಚಕ್ರ ವಾಹನ ಸವಾರ ಗುಳೆದಳ್ಳ‌ ಕ್ಯಾಂಪ್ ನಿವಾಸಿ ತೆಶಿ ತೆರಿಂಗ್ ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿಗೆ ರವಾನಿಸಲಾಗಿದೆ.
ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!