ಕಾರ್ಯಕ್ರಮ

ಕುಶಾಲನಗರದಲ್ಲಿ ಮಹಿಳಾ ದಿನ‌ ಆಚರಣೆ

ಕುಶಾಲನಗರ, ಮಾ 09:ಮಹಿಳೆ ತನ್ನ ಕುಟುಂಬದ ಜೊತೆಯಲ್ಲಿ ಹೊಂದಿಕೊಂಡು ಹೋದರೆ ಮಾತ್ರ ಜೀವನದಲ್ಲಿ ಯಶಸ್ಸಿನ ಆದಿ ತಲುಪುತ್ತಾಳೆ ಎಂದು ಸಲಿನಾ ಡಿ ಕುನ್ನ ಹೇಳಿದರು. ಕುಶಾಲನಗರ 470ನೇ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆ ಹಲವಾರು ಜವಾಬ್ದಾರಿಗಳ ಜೊತೆಯಲ್ಲಿ ಕುಟುಂಬದ ನಿರ್ವಹಣೆಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಜೀವನ ನಡೆಸುತ್ತಾಳೆ. ಮಹಿಳೆಯರು ಇಂದು ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರುವುದು ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಮೀರಾ ಕುಟುಂಬದ ಬೆನ್ನೆಲುಬಾಗಿ ಇರುವುದು ಮಹಿಳೆ ಗಾಂಧೀಜಿ ಕಂಡ ರಾಮ ರಾಜ್ಯ ಕನಸಾಗೇ ಉಳಿದಿದೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನಗಳು ಇಡೀ ಸಮಾಜ ತಲೆತಗ್ಗಿಸುವಂಥ ಕೆಲಸವಾಗಿದೆ. ಇಂದು ಮಹಿಳೆ ಅಬಲೆಯಲ್ಲ ಸಬಲೆ ಎಂದು ತೋರಿಸುವ ಕೆಲಸ ಎಲ್ಲಾ ಮಹಿಳೆಯರು ಮಾಡಬೇಕು ಆಗ ಮಾತ್ರ ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿಆರ್ ಶರವಣ ಕುಮಾರ್ ಸೂಕ್ಷ್ಮವಾಗಿ ಇತಿಹಾಸವನ್ನು ನೋಡಿದರೆ ಮಾನವ ಕುಲದಲ್ಲಿ ಮಹಿಳೆ ಮೇಲೆ ಎಷ್ಟು ವೈರಾಗ್ಯವಿತ್ತು ಎನ್ನುವುದು ನೋಡಬಹುದು. ಆದರೆ ದೇವತೆಗಳಲ್ಲಿ ಮಹಿಳೆ ದೇವತೆಗಳೆ ಅತಿ ಹೆಚ್ಚು ಇದರಿಂದ ಗೊತ್ತಾಗುತ್ತದೆ ಈ ಭೂಮಿಯಲ್ಲಿ ಮಹಿಳೆಗೆ ಕೊಡುತ್ತಿದ್ದ ಪ್ರಾಮುಖ್ಯತೆ ಏನು ಅಂತ. ಕೆಲವು ಅಹಿತಕರ ಘಟನೆ ನಡೆಯುತ್ತಿದೆ ಕಾರಣ ಗಂಡಸು ಬಲಿಷ್ಠವಾಗಿ ಇರುವುದು ಅದರಿಂದ ಗಂಡಸಿಗೆ ಸಮಾನ ಮಹಿಳೆ ಬೆಳೆದು ನಿಂತಿರುವುದು ಖುಷಿಯ ವಿಷಯ ಎಂದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಶಿಕ್ಷಕಿ ಮೀರಾ. ಶಿಕ್ಷಕ ಉತ್ತಪ್ಪ. ಜಾನ್ಸನ್. ಟಿ. ಆರ್ ಶರವಣ ಕುಮಾರ್ . ಕೆಪಿ ಚಂದ್ರಕಲಾ. ಮಾಜಿ ಸೈನಿಕರದ ಕೃಷ್ಣ ಇವರನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭ ವೇದಿಕೆಯಲ್ಲಿ ನಳಿನಿ ನಂಜಪ್ಪ. ಕಾವೇರಿ ಕಾಳಪ್ಪ. ಶೈಲ. ಸುಶೀಲ. ಜಯ ಮುಂತಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!