ಕ್ರೀಡೆ

ಮಾರ್ಚ್ 14 ರಿಂದ 16 ರವೆರೆಗೆ ಕೊಪ್ಪದಲ್ಲಿ ಕ್ರಿಕೆಟ್ ಟೂರ್ನಿ

ಕುಶಾಲನಗರ, ಮಾ 07: ಕೊಪ್ಪ ಗ್ರಾಮದಲ್ಲಿ ಮಾರ್ಚ್ 14, 15, 16 ರಂದು ಫ್ರೆಂಡ್ಸ್ ಕಪ್ ಸೀಸನ್ 1 ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ದಾನಿಗಳಾದ ಕೊಪ್ಪ ಗ್ರಾಮದ ಸಮಾಜ ಸೇವಕಿ ಅನುಪಮಾ ಅವರು ತಿಳಿಸಿದ್ದಾರೆ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಕ್ರೀಡಾಪಡುಗಳಿಗೆ ಸೂಕ್ತ ವೇದಿಕೆ ಒದಗಿಸಿ ಅವರ ಪ್ರತಿಭೆ ಗುರುತಿಸಲು ಅವಕಾಶ ಕಲ್ಪಿಸಬೇಕಿದೆ. ಎಲ್ಲಾ ತಂಡಗಳು ಕ್ರೀಡಾಸ್ಪೂರ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಶುಭ ಕೋರಿದರು. ಕ್ರೀಡಾಕೂಟ ಆಯೋಜಕ ವಸಂತ ಶೆಟ್ಟಿ ಮಾತನಾಡಿ ಕ್ರೀಡಾಕೂಟದ ಬಗ್ಗೆ ಮಾಹಿತಿ ಒದಗಿಸಿದರು.ಪ್ರಥಮ ಬಹುಮಾನ 20 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ಆಕರ್ಷಕ ಟ್ರೋಫಿ ನೀಡಲಾಗುವುದು. ಇದರೊಂದಿಗೆ ಆಟಗಾರರಿಗೆ ವೈಯಕ್ತಿಕ ಬಹುಮಾನಗಳು ಕೂಡ‌ ನೀಡಲಾಗುವುದು. ಪ್ರತಿ ತಂಡಗಳಿಗೆ 3500 ಪ್ರವೇಶ ಶುಲ್ಕವಿದೆ. ಪಿರಿಯಾಪಟ್ಟಣ ತಾಲ್ಲೂಕಿನ‌ ತಂಡಗಳಿಗೆ ಮಾತ್ರ ಆದ್ಯತೆ.

ಹೆಚ್ಚಿನ‌ ಮಾಹಿತಿಗಾಗಿ ವಸಂತ ಶೆಟ್ಟಿ: 8296521077, ಅನ್ನು: 8296536187 ಸಂಪರ್ಕಿಸಬಹುದು.
ಈ ಸಂದರ್ಭ ಆಯೋಜಕರಾದ ಮಾದೇಶ, ಸಾಗರ್, ನಿತಿನ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!