ಪ್ರಕಟಣೆ

ದೊಡ್ಡ ಮಟ್ಟದ ಸಾಲ ಮಾಡಿ ಮಾಡಿರೋ ಬಜೆಟ್ ಹಾಗಿದ್ದರೂ ಯಾವುದೇ ಗುರುತರವಾದಂತ ಯೋಜನೆ ಇಲ್ಲ

ಕುಶಾಲನಗರ, ಮಾ 06:ಇಂದು ರಾಜ್ಯದ ಬಜೆಟ್ ಮಂಡನೆಯಾದ ವಿಚಾರವಾಗಿ ಮಾತನಾಡಿದ ಕುಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು
ಮಳೆ ಸಂದರ್ಭ ನಮ್ಮ ಕೊಡಗಿನಲ್ಲಿ ದೊಡ್ಡ ಮಟ್ಟದ ಪ್ರವಾಹ ವಾಗುವುದನ್ನು ತಡೆಯಲು ಯಾವುದೇ ಅನುದಾನ ಮೀಸಲಿಡದೆ ಬೆಂಗಳೂರು ಪ್ರವಾಹ ತಡೆಗಟ್ಟಲು 5,000 ಕೋಟಿ ಮೀಸಲು ಇಟ್ಟಿದ್ದಾರೆ, ಮತ್ತು ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಆಗಬೇಕು ಎಂಬುವುದು ಬಹು ದಿನಗಳ ಬೇಡಿಕೆ ಅದಕ್ಕೂ ಕೂಡ ಯಾವುದೇ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ ಮತ್ತೆ ನಾವು ಹಾರ್ಟ್ ಅಟ್ಯಾಕ್ ಮತ್ತು ಕ್ಯಾನ್ಸರ್ ಅಂತ ಖಾಯಿಲೆಗೆ ಮೈಸೂರು ಅಥವಾ ಮಂಗಳೂರಿಗೆ ಹೋಗುವಂತ ಪರಿಸ್ಥಿತಿ ಹಾಗೂ ಕೊಡಗಿನ ರೈಲ್ವೆ ಯೋಜನೆಗೆ ಜಾಗ ಅಕ್ವೇರ್ ಮಾಡಲು ಸುಮಾರು 2,000 ಕೋಟಿ ಬೇಕಾಗಿದೆ ಆದರೆ ಸರ್ಕಾರ 7 ಹೊಸ ರೈಲ್ವೆ ಮಾರ್ಗಕ್ಕೆ ಕೇವಲ 600 ಕೋಟಿ ಮೀಸಲಿಡುವ ಮುಖಾಂತರ ಕೊಡಗಿನ ರೈಲ್ವೆ ಯೋಜನೆಗೆ ಎಳ್ಳುನೀರು ಬಿಟ್ಟಿದ್ದಾರೆ, ಅಂಗನವಾಡಿಯಲ್ಲಿ ಮಹಿಳೆಯರಿಗೆ ನೀಡುತ್ತಿದ್ದಂತ ಫುಡ್ ಅನ್ನು ನಿಲ್ಲಿಸಿ ಬಿಸಿಯೂಟದ ವ್ಯವಸ್ಥೆ ಮಾಡಿರುವುದು ನಮ್ಮ ಮಲೆನಾಡು ಪ್ರದೇಶಗಳಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಬಿಸಿ ಊಟದ ಯೋಜನೆ ಮಲೆನಾಡು ಪ್ರದೇಶಗಳಿಗೆ ಯಾವುದೇ ಪ್ಲಾನ್ ಇಲ್ಲದೆ ಅವಜ್ಞಾನಿಕವಾಗಿ ಮಾಡಿರುವ ಯೋಜನೆ ಆಗಿರುತ್ತದೆ,

ಒಟ್ಟಾರೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಓದಿರುವಂತ 82 ಪುಟಗಳ ಬಜೆಟ್ ನಲ್ಲಿ ಕೊಡಗಿಗಾಗಿ ಯಾವುದೇ ಪ್ರತ್ಯೇಕ ಯೋಜನೆಗಳು ಇಲ್ಲ, ಅಳುವ ಮಕ್ಕಳಿಗೆ ಬಾಳೆಹಣ್ಣು ಕೊಟ್ಟ ಹಾಗೆ ನಮ್ಮ ಕೊಡಗಿನ ಅಭಿವೃದ್ಧಿಗೆ ಸರ್ಕಾರ ಏನು ಕೊಟ್ಟಿದೆ ಎಂಬುದರ ಬಗ್ಗೆ ಶಾಸಕರುಗಳು ತಿಳಿಸಬೇಕು ಅಷ್ಟೇ.

Related Articles

Leave a Reply

Your email address will not be published. Required fields are marked *

Back to top button
error: Content is protected !!