ಆರೋಪ

ಕುಶಾಲನಗರ ಸೋಮೇಶ್ವರ ದೇವಾಲಯದಲ್ಲಿ ಘಂಟೆ ನಾಪತ್ತೆ: ಪತ್ತೆಗೆ ಮಾಜಿ ಸೈನಿಕ ಹರೀಶ್ ಒತ್ತಾಯ

ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಘಂಟೆಗಳ ಕಾಣೆಯಾದ ಬಗ್ಗೆ ಮಾಜಿ ಸೈನಿಕರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

ದೇವಾಲಯಕ್ಕೆ‌ ಭೇಟಿ ನೀಡಿದ ಸಂದರ್ಭ ಎಂದಿನ ಸ್ಥಾನದಲ್ಲಿದ್ದ ಎರಡು ಬೃಹತ್ ಘಂಟೆಗಳು ಕಾಣೆಯಾಗಿವೆ. ಈ ಬಗ್ಗೆ ಅರ್ಚಕರಲ್ಲಿ ವಿಚಾರಿಸಿದಾಗ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ. ಇತ್ತೀಚಿನ ಚಿನ್ನ, ಬೆಳ್ಳಿ, ಕಂಚಿನ ಮಾರುಕಟ್ಟೆ ಹಿನ್ನೆಲೆಯಲ್ಲಿ ಘಂಟೆಗಳ ಕಳ್ಳತನ ನಡೆದಿರುವ ಸಾಧ್ಯತೆ ಇರುವುದಾಗಿ ಮಾಜಿ ಸೈನಿಕ‌ ಹರೀಶ್ ಕುಮಾರ್ ಸಂಶಯ ವ್ಯಕ್ತಪಡಿಸಿದ್ದಾರೆ. ಕೂಡಲೆ ದೇವಸ್ಥಾನ ಸಮಿತಿ ಈ ಬಗ್ಗೆ ಕ್ರಮವಹಿಸಬೇಕಿದೆ. ಇಲ್ಲದಿದಲ್ಲಿ ಮಾಜಿ ಸೈನಿಕರ ಸಂಘದಿಂದ ಪ್ರಕರಣ ದಾಖಲಿಸುವುದಾಗಿ ಹರೀಶ್ ಕುಮಾರ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!