ಸುದ್ದಿಗೋಷ್ಠಿ

ಹಿಂದೂ ಸಂಗಮ ಶೋಭಾಯಾತ್ರೆ ಯಶಸ್ವಿಗೆ ಹಿಂದೂ ಸಮಾಜಗಳ ಮುಖಂಡರ ಮನವಿ

ಕುಶಾಲನಗರ, ಜ 19: : ಕುಶಾಲನಗರದಲ್ಲಿ ಇದೇ ತಿಂಗಳ ತಾ.25 ರಂದು ಹಿಂದೂ ಸಂಗಮ ಅಯೋಜನಾ ಸಮಿತಿ ವತಿಯಿಂದ ಸಂಘಟಿಸುತ್ತಿರುವ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಯಶಸ್ವಿಯಾಗಿ ನಡೆಯಲು ಎಲ್ಲಾ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲದಲ್ಲಿ ಆಗಮಿಸಿ ಯಶಸ್ವಿ ಗೊಳಿಸಲು ಹಿಂದೂ ಸಮಾಜದ ವಿವಿಧ ಸಮುದಾಯಗಳ ಪ್ರಮುಖರು ವಿನಂತಿಸಿಕೊಂಡರು. ವಾಸವಿ ಸಭಾಂಗಣದಲ್ಲಿ ನಡೆದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ,
ಹಿಂದೂ ಸಂಘಟನೆಗಳ ಮುಖಂಡ ಜಿ.ಎಲ್.ನಾಗರಾಜು, ನಶಿಸುತ್ತಿರುವ ಹಿಂದೂ ಸನಾತನ ಸಂಸ್ಕ್ರತಿ ಸಂರಕ್ಷಣೆಗೆ ಹಿಂದೂ ಮಂದಿ ಎಲ್ಲರೂ ಒಗ್ಗಟ್ಟಾಗಬೇಕಿದೆ. ಈ ನಿಟ್ಟಿನಲ್ಲಿ ಹಿಂದೂ ಸಂಗಮ ಒಂದು ಯಶಸ್ವಿ ಆಚರಣೆಯಾಗಬೇಕಿದೆ.
ಕುಶಾಲನಗರದ ಪ್ರತಿಯೊಂದು ಹಿಂದೂ ಕುಟುಂಬಗಳ ಮಂದಿ ತಪ್ಪದೇ ಶೋಭಾ ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.

ಕುಶಾಲನಗರದ ತಾವರೆಕೆರೆಯ ವಿವೇಕಾನಂದ ಕಾಲೇಜು ಬಳಿಯಿಂದ ಸರಿಯಾಗಿ ಮಧ್ಯಾಹ್ನ 2-30 ಗಂಟೆ ಯಿಂದ ಶೋಭಾ ಯಾತ್ರೆ ಮುಖ್ಯ ರಸ್ತೆಯಿಂದ, ಐಬಿ ರಸ್ತೆಗಾಗಿ ಗಣಪತಿ ದೇವಾಲಯ ವೃತ್ತದಿಂದ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಬಳಿಕ ವೇದಿಕೆ ಕಾರ್ಯಕ್ರಮ 3-30 ಕ್ಕೆ ಆರಂಭವಾಗಲಿದೆ. ಪುತ್ತೂರಿನ ವಿವೇಕಾನಂದ ಕಾಲೇಜು ಅಧ್ಯಕ್ಷ ರವೀಂದ್ರ ಪುತ್ತೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ

ಹಿಂದೂ ಸಮಾಜ ಹಲವು ಜಾತಿ ಉಪಜಾತಿಗಳಲ್ಲಿ ಹಂಚಿ ಹೋಗಿದ್ದರೂ ಕೂಡ ಹಿಂದೂ ಸಂಗಮದ ವಿಚಾರದಲ್ಲಿ ನಾವೆಲ್ಲರೂ ಒಮ್ಮತದಿಂದ ಸೇರಿದ್ದೇವೆ ಎಂದು ಮುತ್ತಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವರದ ಹೇಳಿದರು.

ತಾ.25 ರಂದು ನಡೆಯುವ ಹಿಂದೂ ಶೋಭಾ ಯಾತ್ರೆ ಯಶಸ್ವಿಯಾಗಿ ನಡೆಯಲು ಕುಶಾಲನಗರ ಹಾಗೂ ಸುತ್ತಮುತ್ತಲಿನ ಸಮಸ್ತ ಹಿಂದೂ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹಿಂದೂ ಸಮಾಜದ ಆಚಾರ ವಿಚಾರಗಳು ಹಾಗೂ ಸಂಪ್ರದಾಯ ಗಳನ್ನು ಸಂರಕ್ಷಿಸಬೇಕು‌.ಬಳಿಕ ವೇದಿಕೆ ಕಾರ್ಯಕ್ರಮ 3-30 ಕ್ಕೆ ಆರಂಭವಾಗಲಿದೆ. ಪುತ್ತೂರಿನ ವಿವೇಕಾನಂದ ಕಾಲೇಜು ಅಧ್ಯಕ್ಷ ರವೀಂದ್ರ ಪುತ್ತೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಕೋರಿದರು.

ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುಂಡ, ಗೌಡ ಯುವ ವೇದಿಕೆ ಅಧ್ಯಕ್ಷ ಕೊಡಗನ ಹರ್ಷ, ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಹೆಚ್.ಎಂ.ಮಧುಸೂದನ್, ದೇವಾಂಗ ಸಮಾಜದ ಅಧ್ಯಕ್ಷ ಡಿ.ವಿ.ರಾಜೇಶ್, ಕೇರಳ ಸಮಾಜದ ಅಧ್ಯಕ್ಷ ಪಿ. ರವೀಂದ್ರ, ಮಾವೇಲಿ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಜಿ.ಪ್ರಕಾಶ್, ತಾಲ್ಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಹೆಚ್.ಬಿ.ರಾಜಮೂರ್ತಿ, ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಯಶವಂತ್ ಅಚ್ಚಯ್ಯ, ನಾಮಧಾರಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಎಸ್.ಅಶೋಕ್, ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಂ.ಪ್ರಕಾಶ್, ಬಿ.ಅಮೃತರಾಜು, ಚಂದ್ರು ಮತ್ತಿತರರು ಗೋಷ್ಠಿ ಯಲ್ಲಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!