ಅವ್ಯವಸ್ಥೆ

ಕಾಮಗಾರಿ ನಡೆದ ಒಂದೇ ವರ್ಷದಲ್ಲಿ ನೀರಿನ ರಭಸಕ್ಕೆ ಕೋಚಿಹೋದ ಹಾರಂಗಿ ಮುಖ್ಯ ನಾಲೆಯ ತಳ ಭಾಗ

ಕೂಡಿಗೆ, ಜ. 10: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ನಾಲೆಯ ಮುಖ್ಯ ದ್ವಾರದಿಂದ 200 ಮೀಟರ್ ಅಂತರದಲ್ಲಿರುವ ಮುಖ್ಯ ನಾಲೆಯ ಕಾಮಗಾರಿಯು ನಡೆದು ಒಂದು ವರ್ಷ ಕಳೆಯುವುದ ಒಳಗೆ ನಾಲೆಯ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಹಾರಂಗಿಯ ಮುಖ್ಯ ನಾಲೆಯಲ್ಲಿ ನಡೆದಿದೆ.
ಕಳೆದ ವರ್ಷ 50. ಕೋಟಿ ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಟೆಂಡರ್ ಪ್ರಕ್ರಿಯೆ ನಡೆದು ಅಣೆಕಟ್ಟೆಯ ಸಮೀಪದ ಒಂದನೆಯ ತೂಬಿನಿಂದ 6. ತೂಬಿನವರೆಗೆ ಕಾಮಗಾರಿಯು ನಡೆದಿತು.ಅದರೆ ಅಣೆಕಟ್ಟೆಯ ಸಮೀಪದ ಮುಖ್ಯ ನಾಲೆ ತಳ ಭಾಗದಲ್ಲಿ 15.ರಿಂದ 20. ಮೀಟರ್ ಗಳಷ್ಟು ಅಂತರ ಒಂದೇ ವರ್ಷಕ್ಕೆ ಕಾಂಕ್ರೀಟ್ ಸಂಪೂರ್ಣವಾಗಿ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಟೆಂಡರ್ ಅನ್ನು ಆಂಧ್ರಪ್ರದೇಶದ ಅಮೃತ್ ಕಂಪನಿಯ ರವರು ಗುತ್ತಿಗೆ ಪಡೆದು ಕಾಮಗಾರಿಯು ನಡೆಸಿರುತ್ತಾರೆ.
ಮುಖ್ಯ ನಾಲೆ ತಳ ಭಾಗದ ಕಾಂಕ್ರೀಟ್ ಕಾಮಗಾರಿಯು ಕೊಚ್ಚಿ ಹೋಗಿರುವುದನ್ನು ಸಂಬಂಧಿಸಿದ ಗುತ್ತಿಗೆದಾರ ಸರಿಪಡಿಸುವಂತೆ ಅಚ್ಚುಕಟ್ಟು ಪ್ರದೇಶ ರೈತರ ಅಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!