ಕುಶಾಲನಗರ, ಡಿ 30:ದಿನಾಂಕ: 27-12-2025 ರಂದು ರಾತ್ರಿ ಸುಮಾರು 10.20 ಘಂಟೆ ಸಮಯದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನವಳವಾಡಿ ಗ್ರಾಮದ ಹೆದ್ದಾರಿಯಲ್ಲಿ ಅಕ್ಷಯ್ ಕುಮಾರ್ ಎಂಬಾತನು ಅತೀವೇಗ & ಅಜಾಗೂಕತೆಯಿಂದ ಜೀಪನ್ನು ಚಲಾಯಿಸಿ ಅಪಘಾತ ಪಡಿಸಿ ಮೂರು ವಾಹನಗಳು ಜಖಂಗೊಂಡಿದ್ದು, ಅಪಘಾತ ಪಡಿಸಿದ ಕೆಎ 23 ಎಂ 5928 ರ ಜೀಪ್ನ ಚಾಲಕನಾದ ಅಕ್ಷಯ್ ಕುಮಾರ್ ಎಂಬಾತನು ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.
ಮಧ್ಯಪಾನ ಮಾಡಿ ರಸ್ತೆಯಲ್ಲಿ ವಾಹನ ಚಲಾಯಿಸುವ ಸಂದರ್ಭ ಅಪಘಾತವಾದಲ್ಲಿ ಜೀವಕ್ಕೆ ಹಾನಿಯುಂಟಾಗುವ ಬಗ್ಗೆ ಅರಿವಿದ್ದರೂ ಸಹ ಮಧ್ಯಪಾನ ಮಾಡಿ ಅತೀವೇಗ & ಅಜಾಗೂಕತೆಯಿಂದ ವಾಹನ ಚಾಲನೆ ಮಾಡಿ ಬಸ್ಗೆ ಡಿಕ್ಕಿಪಡಿಸಿರುವ ಜೀಪ್ ಚಾಲಕನಾದ ಅಕ್ಷಯ್ ಕುಮಾರ್ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 281, 125 (ಎ) 110 ಬಿ.ಎನ್.ಎಸ್ ಅಕ್ಸ್ & 187 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ ಹಾಗೂ ಬೋಯಿಕೇರಿ ಗ್ರಾಮದ ನಿವಾಸಿಯಾದ ಆರೋಪಿ ಅಕ್ಷಯ್ ಕುಮಾರ್, 26 ವರ್ಷ ಎಂಬಾತನನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
> ಹೊಸ ವರ್ಷ ಆಚರಣೆಯ ಸಂದರ್ಭ ವಾಹನ ಚಾಲಕರು ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಅಪಘಾತ ಸಂಭವಿಸುವ ಹಾಗೂ ಅಪಘಾತದಲ್ಲಿ ಜೀವಕ್ಕೆ ಹಾನಿಯಾಗುವ ಬಗ್ಗೆ ಅರಿವಿದ್ದರೂ ಸಹ ಮಧ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಪಡಿಸಿದ್ದಲ್ಲಿ ಕೊಲೆಯಲ್ಲದ ಅಪರಾಧಿಕ ನರಹತ್ಯೆ(Culpuble Homicido)ಯನ್ನು ಮಾಡುವ ವ್ಯಕ್ತಿಗೆ ಕನಿಷ್ಠ 03 ವರ್ಷಗಳ ಜೈಲು ಶಿಕ್ಷೆಯನ್ನು ಅಥವಾ ಗರಿಷ್ಠ 07 ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
Back to top button
error: Content is protected !!