ಕುಶಾಲನಗರ, ಡಿ 28: ಮೈಸೂರು ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ನೀಡಲ್ಪಡುವ ರಾಜ್ಯಮಟ್ಟದ ಚಿನ್ಮಯಿ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ದಂಪತಿಗಳು ಭಾಜನರಾಗಿ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದರು.
ಪ್ರೌಢಶಾಲಾ ಶಿಕ್ಷಕರ ವಿಭಾಗದಲ್ಲಿ ಶಿಕ್ಷಕ ದಂಪತಿಯಾದ ಕುಶಾಲನಗರದ ನಿವಾಸಿಯಾಗಿರುವ ವೃತ್ತಿ ಶಿಕ್ಷಕ ವಿರೂಪಾಕ್ಷ ಎಸ್ ಎಸ್. (ಎಸ್ ಜೆ ಎಂ ವಿದ್ಯಾಸಂಸ್ಥೆ ಪ್ರೌಢಶಾಲೆ ವಿಭಾಗ ಹೊಳಲ್ಕೆರೆ) ಇವರ ಪತ್ನಿ ಶಿಕ್ಷಕಿ ಬಿ.ಬಿ. ಹೇಮಲತಾ (ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕುಶಾಲನಗರ ) ಇವರಿಗೆ ಪ್ರಶಸ್ತಿ ಲಭಿಸಿದೆ.
ಹಾಗೆಯೇ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕ ದಂಪತಿಯಾದ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರೇಣುಕಸ್ವಾಮಿ ಹಾಗೂ ಮೈಸೂರು ಜಿಲ್ಲೆ ಕೊಪ್ಪ ಬಳಿಯ ಗುಡ್ಡೇನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಕಲಾವತಿ ಇವರು ರಾಜ್ಯಮಟ್ಟದ ಚಿನ್ಮಯಿ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Back to top button
error: Content is protected !!