ಸಾಂಸ್ಕೃತಿಕ

ವಾಟರ್ ಪಾರ್ಕ್ ನಲ್ಲಿ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ವಿದ್ಯಾರ್ಥಿಗಳ ಉದ್ಘಾಟನೆ ನೃತ್ಯ ಪ್ರದರ್ಶನ

ಕುಶಾಲನಗರ, ಡಿ 17: ದಿನಾಂಕ: 16-12-2025 ಈ ಮಂಗಳವಾರ ಹುಣಸೇವಾಡಿಯ ಕೂರ್ಗ್ ವಾಟರ್ ಪಾರ್ಕ್ ನಲ್ಲಿ ಆಯೋಜಿಸಲಾದ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘ (ರಿ) ಇವರ ಕೊಡಗು ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ, ನೃತ್ಯ ಸಂಯೋಜಕ ಅಕ್ತರ್ ರವರ ಮಾಲೀಕತ್ವದ ಕೊಡಗಿನ, ಕೂಡಿಗೆಯ ಹೆಸರಾಂತ ನೃತ್ಯ ಸಂಸ್ಥೆಯಾದ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ವಿಧ್ಯಾರ್ಥಿಗಳು ಅತ್ಯದ್ಭುತವಾದ ಉದ್ಘಾಟನೆ ನೃತ್ಯ ಪ್ರದರ್ಶನ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದ ಅತಿಥಿ ಗಣ್ಯರು , ಕೊಡಗು ಪತ್ರಕರ್ತರು ಹಾಗೂ ಸಾರ್ವಜನಿಕರ ಗಮನಸೆಳೆದರು.

ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ವೇದಿಕೆ ಚಾಲನೆಗೆ ಆಗಮಿಸಿದ್ದ ಹಾಸ್ಯನಟ ಹಾಗೂ ಬಿಗ್ ಬಾಸ್ ಸ್ಪರ್ಧಿಯಾದ ಶ್ರೀ ತುಕಾಲಿ ಸ್ಟಾರ್ ಸಂತೋಷ್ ರವರು ನೃತ್ಯ ಪ್ರದರ್ಶನ ಮಾಡಿದಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಶ್ರೀ ಪ್ರಭುದೇವ್ ರವರು ಮತ್ತು ಕೂರ್ಗ್ ವಾಟರ್ ಪಾರ್ಕ್ ನ ಮಾಲೀಕರಾದ ಶ್ರೀ ಲಕ್ಷ್ಮೀನಾರಾಯಣ ಹಾಗೂ ಸರ್ವ ಪದಾಧಿಕಾರಿಗಳು ಪತ್ರಕರ್ತರು ಪ್ರಶಂಸನಾಪತ್ರ ಹಾಗೂ ಪದಕ ನೀಡಿ ಗೌರವಿಸಿ ಅಭಿನಂದಿಸಿದರು. ಎ ಕ್ರಿಯೇಟಿವ್ ವಿಧ್ಯಾರ್ಥಿಗಳ ನೃತ್ಯ ಪ್ರದರ್ಶನ ವೀಕ್ಷಿಸಿದ ಎಲ್ಲಾ ಪತ್ರಕರ್ತರು ಮತ್ತು ಸಾರ್ವಜನಿಕರು ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿ ಆನಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!