ಕ್ರೀಡೆ

ವಾಲಿಬಾಲ್ ಪಂದ್ಯಾವಳಿ, ಸ್ಪೃಕರ್ಸ್ ಮಲ್ಲೇನಹಳ್ಳಿ ತಂಡ ಪ್ರಥಮ

ಕೂಡಿಗೆ, ಡಿ.15:ಹುದುಗೂರು ಗ್ರಾಮದ ಶ್ರೀ ಕಾಳಿಕಾಂಬಾ ಯುವಕ ಸಂಘದ ‌ ವತಿಯಿಂದ ಪ್ರಥಮ ವರ್ಷದ ಲೀಗ್ ಮಾದರಿಯ ಹೊನಲು ಬೆಳಕಿನ ಕಾಳಿಕಾಂಬಾ ವಾಲಿಬಾಲ್ ಕಪ್‌ 2025 . ಪಂದ್ಯಾಟದಲ್ಲಿ ಆರ್.ಕೆ. ಸ್ಪೃಕರ್ಸ್ ಮಲ್ಲೇನಹಳ್ಳಿ ತಂಡ ಪ್ರಥಮ ಸ್ಧಾನ ಪಡೆದು ನಗದು ಹಾಗೂ ಪ್ರಶಸ್ತಿಯನ್ನು ತನ್ನಾದಗಿಸಿಕೊಂಡಿತು.
ದ್ವೀತಿಯ ಸ್ಥಾನ ಟೀಮ್ ಆಗಸ್ತ್ಯ, ತೃತೀಯ ಹುದುಗೂರು ಕಾಳಿಕಾಂಬಾ ತಂಡ, ಚತುರ್ಥ ಸ್ಥಾನವನ್ನು ಟೀಮ್ ಲಾಲಿ ಬ್ಯಾಡಗೊಟ್ಟ ತಂಡ ಪಡೆದುಕೊಂಡಿತು.
ವಿಜೇತ ತಂಡಗಳಿಗೆ ಹುದುಗೂರು ಗ್ರಾಮದ ಮಾಜಿ ಸೈನಿಕ ಸಿ. ಎಲ್. ಭರತ್ ಬಹುಮಾನವನ್ನು ವಿತರಣೆ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಳಿಕಾಂಬಾ ಯುವಕ ಸಂಘದ ಅಧ್ಯಕ್ಷ ಐ. ಜಿ. ಶರತ್, ಉಪಾಧ್ಯಕ್ಷ ಕೆ.ಡಿ. ಕಾರ್ತೀಕ್‌, ಕಾರ್ಯದರ್ಶಿ ಟಿ. ಎಸ್,ಚ ಚಂದ್ರಕಾಂತ್, ಖಜಾಂಚಿ ಸಿ.ಎಸ್. ನವೀನ್ , ಗ್ರಾಮ ಪಂಚಾಯತಿ ಸದಸ್ಯ ಹೆಚ್. ಎಸ್. ರವಿ ಸೇರಿದಂತೆ ಸಂಘದ ಸದಸ್ಯರು, ಲೀಗ್ ಪಂದ್ಯಾಟದ 8. ತಂಡಗಳ ಅಟಗಾರರು, ಗ್ರಾಮಸ್ಥರು , ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!