ಕುಶಾಲನಗರ, ಡಿ 11: ಮಕ್ಕಳ ಸಾಹಿತ್ಯ ಪರಿಷತ್ ಕುಶಾಲನಗರ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಸುಂಟಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
5ನೇ ತರಗತಿ ಮಕ್ಕಳಿಗೆ ತಮ್ಮ ಮನೆಯ ಸಾಕು ಪ್ರಾಣಿಗಳ ಬಗ್ಗೆ ಪ್ರಬಂಧ ಸ್ಪರ್ಧೆ, 6ನೇ ಹಾಗೂ 7ನೇ ತರಗತಿಯ ಮಕ್ಕಳಿಗೆ ಪೋಷಕರ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಯಿತು. ಪ್ರಾಥಮಿಕ ಶಾಲ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. 22 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿಯಾದರು.
ಕಿರಿಯ ಪ್ರಾಥಮಿಕ ಶಾಲೆಯಿಂದ ಸ್ಪರ್ಧಿಸಿದ ವಿದ್ಯಾರ್ಥಿಗಳ ಬಹುಮಾನ ಪಟ್ಟಿ.
1) ಪ್ರೇರಣ ಮೂರನೇ ತರಗತಿ ( ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗದ್ದೆ ಹಳ್ಳ )
2)ಹರ್ಷಿಯ ಕೆ. ಬಿ( ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗದ್ದೆ ಹಳ್ಳ )
3) ಅತಿಫ್ 4ನೇ ತರಗತಿ ( ಸೇಂಟ್ ಅಂತೋನಿ ತಲೆ ಸುಂಟಿಕೊಪ್ಪ )
4) ಸಂಚತ ವಿ.7 ನೇ ತರಗತಿ ( ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗದ್ದೆ ಹಳ್ಳ )
5) ಕೌಸಲ್ಯ.R ಏಳನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗದ್ದೆ ಹಳ್ಳ )
6) ಫಾಹಿಮಾ( ಏಳನೇ ತರಗತಿ ಗದ್ದೆ ಹಳ್ಳ )
7) ಹಂಶಿಕ. ಯು 7 ನೇ ತರಗತಿ ( ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗದ್ದೆ ಹಳ್ಳ)
ಚಂದ್ರ ವತಿ ಡಿ.ಎಸ್ ಪ್ರಭಾರ ಮುಖ್ಯ ಶಿಕ್ಷಕಿ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ವೇದಿಕೆಯಲ್ಲಿ ಪರಿಷತ್ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷೆ ಚೈತನ್ಯ ಸಿ ಮೋಹನ್, ಉಪಾಧ್ಯಕ್ಷ ಪ್ರಸನ್ನ ಬಿ. ಎಸ್, ಕಾರ್ಯಕ್ರಮದ ಆಯೋಜಕಿ ಕೊಕ್ಕಲೇರ ಧರಣಿ, ಮಂಜುಳಾ ಅಣ್ಣಯ್ಯ ಪ್ರಧಾನ ಕಾರ್ಯದರ್ಶಿ ಕಾವ್ಯ ಗೌಡ , ಪ್ರಸನ್ನ ಬಿ. ಎಸ್ ದೈಹಿಕ ಶಿಕ್ಷಣ ಶಿಕ್ಷಕರಾದ ಪಿ. ಇ ನಂದ ಉಪಸ್ಥಿತರಿದ್ದರು.
Back to top button
error: Content is protected !!