ಸಭೆ
ಕುಶಾಲನಗರ ಗುಂಡುರಾವ್ ಬಡಾವಣೆಯಲ್ಲಿ ಕ್ರೀಡಾಂಗಣಕ್ಕೆ ಜಾಗ ಕೋರಿ ಶಾಸಕರಿಗೆ ಮನವಿ
ಹಂತಹಂತವಾಗಿ ಬೇಡಿಕೆ ಈಡೇರಿಕೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚೆ


ಕುಶಾಲನಗರ, ಡಿ 01: ಕುಶಾಲನಗರದ ಗುಂಡುರಾವ್ ಕ್ರೀಡಾಂಗಣ ಸಮಿತಿ ವತಿಯಿಂದ ಕ್ರೀಡಾಂಗಣಕ್ಕೆ ಬೇಡಿಕೆಯಿರಿಸಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಮಿತಿಯ ಮೂಲಕ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ ಅವರು, ನಿಮ್ಮೆಲ್ಲರಂತೆ ಕ್ರೀಡೆಯನ್ನು ಪ್ರೋತ್ಸಾಹಿಸಬೇಕೆನ್ನುವ ಇಚ್ಚೆ ನನ್ನಲ್ಲೂ ಇದೆ. ಯುವ ಪೀಳಿಗೆ ದಾರಿ ತಪ್ಪದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ. ಈ ಹಿನ್ನೆಲೆಯಲ್ಲಿ ನಿಮ್ಮ ಆಶಯದಂತೆ ನಾವು ಕೂಡ ನಿಮ್ಮ ಜೊತೆಯಲ್ಲಿರುತ್ತೇವೆ ಎಂದು ಭರವಸೆ ನೀಡಿದರು.