ಕುಶಾಲನಗರ, ನ 30: ಕುಶಾಲನಗರದ ಆಟೋ ಚಾಲಕರು ಮಾಲೀಕರ ಸಂಘದ ಆಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಅಂಗವಾಗಿ ಭಾನುವಾರ ಬೆಳಗ್ಗೆ ಭವ್ಯ ಮೆರವಣಿಗೆ ನಡೆಯಿತು.
ಟಿ.ಎ.ನಾರಾಯಣಗೌಡರು ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಆನಂದ್ ಕನ್ನಡಿಗ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಪ್ರತಿಯೊಬ್ಬ ಆಟೋ ಚಾಲಕ ಮಾಲೀಕರು ಭಾಗಿಯಾದಾಗ ಮಾತ್ರ ಸಂಘದಿಂದ ನಡೆಯುವ ಕನ್ನಡ ರಾಜ್ಯೋತ್ಸವದ ಮಹತ್ವಕ್ಕೆ ಅರ್ಥ ದೊರೆಯಲಿದೆ. ಕನ್ನಡದ ಉಳಿವಿಗೆ ಎಲ್ಲರೂ ಮುಂದಾಗಬೇಕಿದೆ ಎಂದರು.
ಸಂಘದ ಅಧ್ಯಕ್ಷ ಕೃಷ್ಣದರ್ಶನ್, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿವ್ಯ ದೇವಾಂಗ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಾಗರ್ ತೊರೆನೂರು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್ ದೇವಾಂಗ, ನಗರ ಘಟಕದ ಅಧ್ಯಕ್ಷರು ಯೋಗೇಶ್ ಡಿಆರ್ ನಗರ ಘಟಕದ ಉಪಾಧ್ಯಕ್ಷ ರವಿ ಡಿ.ಎನ್, ಮಹಿಳಾ ಘಟಕದ ಅಧ್ಯಕ್ಷ ಅನಿತಾ ದೇವಾಂಗ, ತಾಲೂಕು ಸಂಘಟನಾ ಕಾರ್ಯದರ್ಶಿ ಜಯ ಸ್ವಾಮಿ, ಮಹಿಳಾ ತಾಲೂಕು ಸಂಘಟನಾ ಕಾರ್ಯದರ್ಶಿ ಸಿಂಧು, ಪವನ್ ಮುರಳಿ ಹಾಗೂ ಎಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಆಟೋ ಚಾಲಕರು ಮಾಲೀಕರು ಹಾಜರಿದ್ದರು
Back to top button
error: Content is protected !!