ಅಪಘಾತ

ಆನೆಕಾಡು ಬಳಿ ಎರಡು ಕಾರು, ಸ್ಕೂಟಿ ನಡುವೆ ಅಪಘಾತ: ಸವಾರನ ಸ್ಥಿತಿ ಗಂಭೀರ

ಕುಶಾಲನಗರ, ನ 17: ಕುಶಾಲನಗರ- ಸುಂಟಿಕೊಪ್ಪ ಮಧ್ಯದ ಆನೆಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರು ಹಾಗೂ ಒಂದು ಬೈಕಿನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.

ಬೈಕ್ ಸವಾರ ನಿಸರ್ಗಧಾಮ ಬಳಿಯ ಫಾಬಿನ್ಸ್ ಹೋಟೆಲ್ ಸಿಬ್ಬಂದಿ ಹಾಗೂ ಮಡಿಕೇರಿ ನಿವಾಸಿ ಎಂದು ತಿಳಿದುಬಂದಿದೆ‌.
ಡಿಕ್ಕಿಯ ರಭಸಕ್ಕೆ ಬೈಕ್ ರಸ್ತೆಯಿಂದ ಕಾಡಿನೊಳಗೆ ಹಾರಿದೆ.

ಗಾಯಾಳುವನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಗಿದೆ.
ಎರಡು ಕಾರುಗಳ ಪೈಕಿ ಒಂದು ಸುಂಟಿಕೊಪ್ಪದ ಗದ್ದೆಹಳ್ಳ ಹಾಗೂ ಮತ್ತೊಂದು ಕಾರು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದು ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!