ಕುಶಾಲನಗರ, ನ 16: ಕುಶಾಲನಗರದ ಜಾತ್ರೋತ್ಸವ ದಸರಾ ಸಂಭ್ರಮದಂತೆಯೇ ಇದೆ. ಇತ್ತೀಚಿನ ವರ್ಷಗಳಲ್ಲಿ ಜಾತ್ರೋತ್ಸವವೂ ಯುವಜನೋತ್ಸವವಾಗಿಯೂ ಬದಲಾಗಿದೆ. ಜನರನ್ನು ಸಾಂಸ್ಕೃತಿಕ ನೃತ್ಯಗಳ ಮೂಲಕ ರಂಜಿಸುತ್ತಿದೆ. ಹೌದು, ಕುಶಾಲನಗರದ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ ಪ್ರತಿವರ್ಷ ಜಾತ್ರಾ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಅಂತೆಯೇ ಶನಿವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ರಂಗೇರಿತ್ತು. ಅದಕ್ಕೆ ಕಾರಣ, ಶಿವಧಾರೆ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೀಡಿದ ಅದ್ಭುತ ಪ್ರದರ್ಶನ. ಕುಶಾಲನಗರದ ಪ್ರಸಿದ್ಧ ನೃತ್ಯ ಶಾಲೆಗಳಲ್ಲಿ ಒಂದಾದ ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಶಾಲೆಯ ವಿದ್ಯಾರ್ಥಿಗಳು ಜಾತ್ರಾ ಮೈದಾನದಲ್ಲಿ ಅಮೋಘ ನೃತ್ಯ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಗಮನಸೆಳೆದರು. ಶಿವಧಾರೆಯ ವಿದ್ಯಾರ್ಥಿಗಳು, ಹಿಪಾಪ್, ಜೈ ಹೋ, ಸೇರಿದಂತೆ ಸುಮಾರು ಎಂಟು ಹಾಡುಗಳಿಗೆ ಅದ್ಭುತವಾಗಿ ನೃತ್ಯ ಪ್ರದರ್ಶಿಸಿದರು. ಅದರಲ್ಲಿಯೂ ಅಯ್ಯಪ್ಪನ ನೃತ್ಯ ರೂಪಕ ಅಮೋಘವಾಗಿ ಮೂಡಿಬಂದಿತು. ಈ ನೃತ್ಯ ರೂಪಕವನ್ನು ನೋಡಿದ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದರು, ಎದ್ದು ನಿಂತು ಚಪ್ಪಾಳೆ ತಟ್ಟಿ ಮಕ್ಕಳನ್ನು ಹುರಿದುಂಬಿಸಿದರು. ಒಟ್ಟಾರೆ ಶಿವಧಾರೆಯ ಮಕ್ಕಳು ಜಾತ್ರೋತ್ಸವವದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
Back to top button
error: Content is protected !!