ಕುಶಾಲನಗರ, ನ 14; ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ನ.9 ಮತ್ತು 10 ರಂದು ನಡೆದ 2025-26ನೇ ಸಾಲಿನ ರಾಜ್ಯ ಮಟ್ಟದ ಕರಾಟೆ ಪಂದ್ಯದಲ್ಲಿ ಕುಶಾಲನಗರದ ಫಾತೀಮಾ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
17 ವರ್ಷದ ಬಾಲಕರ ಸ್ಪರ್ಧೆಯಲ್ಲಿ 45 ಕೆ.ಜಿ. ವಿಭಾಗದಲ್ಲಿ ಪಿ.ಆರ್.ಮುಕುಂದ, ಹಾಗೂ 40 ಕೆ.ಜಿ ವಿಭಾಗದಲ್ಲಿ ಬ್ರಿಜೇಶ್, ಮತ್ತು 14 ವರ್ಷದ ಬಾಲಕರ ಸ್ಪರ್ಧೆಯಲ್ಲಿ ಯೂನಿಕ್ ಅಕಾಡೆಮಿಯ ವಿಸೃತ್ ವರದರಾಜ್ 25 ಕೆ. ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗೆಲುವಿಗಾಗಿ ಕರಾಟೆ ಪಟುಗಳು ಅಂಕಣದಲ್ಲಿ ನಡೆಸಿದ ಕಾದಾಟ ಸೇರಿದ್ದ ಜನಸ್ತೋಮವನ್ನು ರೋಮಾಂಚನಗೊಳಿಸಿ,ಬೆರಗಾಗುವಂತೆ ಮಾಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿತು.
ಕರಾಟೆ ಪಟುಗಳು, ವಿವಿಧ ತೆರನಾದ ಪಟ್ಟು ಹಾಕಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದರು. ಎದುರಾಳಿಗೆ ಪಂಚ್ ಮಾಡುವುದು, ಬ್ಯಾಕ್ ಕಿಕ್ ಹೊಡೆಯುವುದು. ಹಾಗೂ ಜಿಗಿದು ತಲೆಗೆ ಹೊಡೆಯುವ ದೃಶ್ಯಗಳು ಬೆರಗು ಮೂಡಿಸಿತು. ಜೋರಾಗಿ ಕೂಗಿ ಚಪ್ಪಾಳೆ ತಟ್ಟುತ್ತಲೇ ಕರಾಟೆ ಪಟುಗಳಿಗೆ ಪ್ರೇಕ್ಷಕರು ಹುರಿದುಂಬಿಸಿದರು.
ಇನ್ನು 50 ಕೆ.ಜಿ. ವಿಭಾಗದಲ್ಲಿ ಪ್ರಣಿತ ನಾಯಕ್,ಹಿತೇಶ್, 56.ಕೆ.ಜಿ.ವಿಭಾಗದಲ್ಲಿ ಕುಲದೀಪ್, ಬೆಳ್ಳಿ ಪದಕ ಹಾಗೂ 36 ಕೆ.ಜಿ. ವಿಭಾಗದಲ್ಲಿ ರಶ್ಮಿ, 30 ಕೆ.ಜಿ.ವಿಭಾಗದಲ್ಲಿ ಭವಿಸ್ ಸುಬ್ಬಯ್ಯ, 26 ಕೆ.ಜಿ. ವಿಭಾಗದಲ್ಲಿ ದಕ್ಷ ಕಂಚಿನ ಪದಕ ಪಡೆದಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಇನ್ಸ್ಟಿಟ್ಯೂಟ್ ತರಬೇತುದಾರ ಸಂಕೇತ್ ಮಾರ್ಗದರ್ಶನದಲ್ಲಿ ಮಕ್ಕಳು ವಿಜಯ ಪತಾಕೆ ಹಾರಿಸಿದ್ದು, ಪೋಷಕರು ತರಬೇತುದಾರ ಸಂಕೇತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ ಇಲಾಖೆಯ ಉಪಾಧ್ಯಕ್ಷ ಅರುಣ್ ಮಾಚಯ್ಯ ಅವರು ಮಕ್ಕಳಿಗೆ ಶುಭ ಹಾರೈಸಿದರು.
Back to top button
error: Content is protected !!