ಕುಶಾಲನಗರ, ನ 06: ಕೊಡಗಿನ ಸುಂಟಿಕೊಪ್ಪದ ಕಲ್ಲೂರು ನಿವಾಸಿ ಪ್ರಶಾಂತ್ ಅವರು ನಿರ್ಮಿಸಿರುವ ಕಂಗ್ರಾಜುಲೇಷನ್ಸ್ ಬ್ರದರ್ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಕುಶಾಲನಗರ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆಯಿತು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರತಾಪ್ ಗಂಧರ್ವ ನಿರ್ದೇಶಿಸಿರುವ ಸಿನಿಮಾದ ಟೀಸರ್ ಬಿಡುಗಡೆ, ಹಾಡುಗಳ ಪ್ರದರ್ಶನ ನಡೆಯಿತು.
ಕೊಡಗಿನ ಯುವ ಪ್ರತಿಭೆ ಪ್ರಶಾಂತ್ ಕಲ್ಲೂರು ಅವರ ನಿರ್ಮಿಸಿರುವ ಚಿತ್ರಕ್ಕೆ ಶುಭಕೋರಿದ ಅವರು, ಚಿತ್ರ ಯಶಸ್ವಿಯಾಗಲು ಯುವ ಸಮೂಹ ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕಿದೆ ಎಂದರು.
ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಮಾತನಾಡಿ, ಚಿತ್ರ ಶತದಿನೋತ್ಸವ ಆಚರಿಸಲೆಂದು ಶುಭ ಕೋರಿದರು.
ಈ ಸಂದರ್ಭ ಸಮಾಜ ಸೇವಕರಾದ ರಂಜನ್, ಇರ್ಫಾನ್, ಅಜೀಜ್, ಕಾರ್ಯಕ್ರಮ ಸಂಯೋಜಕ ಕೆ.ಡಿ.ಪ್ರಶಾಂತ್ ಸೇರಿದಂತೆ ನಾಯಕ ನಟ ರಕ್ಷಿತ್ ನಾಗ್, ನಾಯಕಿಯರಾದ ಸಂಜನಾ ದಾಸ್, ಅನುಷಾ, ಸ್ಟೋರಿ ಕ್ರಿಯೇಟಿವ್ ಹೆಡ್ ಹರೀ ಸಂತೋಷ್ ಹಾಗೂ ಚಿತ್ರತಂಡದವರು ಇದ್ದರು.
Back to top button
error: Content is protected !!