ಕುಶಾಲನಗರ, ನ 06: ಸ್ವಾತಂತ್ರ್ಯ ಹೋರಾಟಗಾರ ದಿ. ಗುಡ್ಡೆಮನೆ ಅಪ್ಪಯ್ಯ ಗೌಡರು ಸೇರಿದಂತೆ ಕೊಡಗನ್ನಾಳಿದ ಲಿಂಗಾಯತ ರಾಜರ ಬಗ್ಗೆ ಅವಹೇಳನ ಮಾಡಿದ ಆರೋಪಿ ಅರೆಯಡ ರಾಜ ಎಂಬವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೊಡಗು ಗೌಡ ಸಮಾಜಗಳ ಒಕ್ಕೂಟ, ಕುಶಾಲನಗರ ಗೌಡ ಸಮಾಜ ಮತ್ತು ಗೌಡ ಯುವಕ ಸಂಘ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಕುಶಾಲನಗರದ ಗೌಡ ಸಮಾಜದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಕೆಲವು ಕಿಡಿಗೇಡಿಗಳು ಸಮುದಾಯಗಳ ನಡುವೆ ಒಡಕು ಮೂಡಿಸಿ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಠಿಸಲು ಪದೇ ಪದೇ ಪ್ರಯತ್ನಿಸುತ್ತಿದ್ದು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ. ಜಿಲ್ಲೆಗೆ ಪ್ರವೇಶಿದಂತೆ ನಿರ್ಬಂಧ ಹೇರಬೇಕಿದೆ. ಗೌಡ ಸಮುದಾಯ ಹಾಗೂ ಸಮುದಾಯದ ವ್ಯಕ್ತಿಗಳ ಬಗ್ಗೆ ಅವಹೇಳನ ಮಾಡುವುದು ವ್ಯಂಗ್ಯವಾಡುವುದು ಮರುಕಳಿಸಿದಲ್ಲಿ ಅಂತಹವರ ವಿರುದ್ದ ಹೋರಾಡಲು ಸಮುದಾಯ ಶಕ್ತವಾಗಿದೆ, ಕಠಿಣವಾಗಿ ವರ್ತಿಸಲು ಸಿದ್ದರಿದ್ದೇವೆ ಎಂದು ಎಚ್ಚರಿಸಿದರು.
ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ, ಆರೋಪಿಯನ್ನು ಶೀಘ್ರಗತಿಯಲ್ಲಿ ಪತ್ತೆಹಚ್ಚಿ ಮೊಕದ್ದಮೆ ದಾಖಲಿಸಿದ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಂತಿ ಸುವ್ಯವಸ್ಥೆ ಕದಡುವವರ ಬಗ್ಗೆ ನಿಗಾವಹಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಜಿಲ್ಲೆಯಲ್ಲಿ ಎಲ್ಲಾ ಜನಾಂಗದವರು ಶಾಂತಿ, ಸೌಹಾರ್ದತೆ, ಸಹಬಾಳ್ವೆಯಿಂದ ಜೀವನ ನಡೆಸುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ಗೋಷ್ಠಿಯಲ್ಲಿ ಕೊಡಗು
ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕರಂದ್ಲಾಜೆ ಕಲಾ, ಪದ್ಮಾವತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ದೇವಜನ ಮಾಲತಿ ಚಿಣ್ಣಪ್ಪ,
ಗೌಡ ಮಾಜಿ ಸೈನಿಕರ ಒಕ್ಕೂಟದ ಅಧ್ಯಕ್ಷ ದೇವಜನ ಚಿಣ್ಣಪ್ಪ,
ಗುಡ್ಡೆಹೊಸೂರು ಗೌಡ ಸಮಾಜ ಅಧ್ಯಕ್ಷ ವಿಶ್ವ ಕುಮಾರ್, ಯುವಕ ಸಂಘದ ಜಂಟಿ ಕಾರ್ಯದರ್ಶಿ ರೋಹಿತ್, ನಿರ್ದೇಶಕ ವಿನಯ್ ಕಾರ್ಯಪ್ಪ ಇದ್ದರು.
Back to top button
error: Content is protected !!