ಅವ್ಯವಸ್ಥೆ

ಬೈಚನಹಳ್ಳಿ ವ್ಯಾಪ್ತಿಯ ನಿಂಗೇಗೌಡ ಬಡಾವಣೆಯಲ್ಲಿ ಮೂಲಸೌಲಭ್ಯ ವಂಚಿತ‌ ನಿವಾಸಿಗಳ ಅಳಲು

ಕುಶಾಲನಗರ, ನ 02:ಕೊಡಗು ಜಿಲ್ಲೆಯ ಕುಶಾಲನಗರದ ತಾಲೂಕಿನ ಬೈಚನಹಳ್ಳಿ ವ್ಯಾಪ್ತಿಯ ನಿಂಗೇಗೌಡ ಬಡಾವಣೆಯಲ್ಲಿ ಕಳೆದ ಎಂಟು ವರ್ಷಗಳಿಂದ ನಡೆಯದ ರಸ್ತೆ ಕಾಮಗಾರಿ ಹಾಗೂ ಸರಕಾರದಿಂದ ಸಿಗುವ ಸೌಲಭ್ಯ ವಂಚಿತ ಇಲ್ಲಿನ ನಿವಾಸಿಗಳು ಪುರಸಭೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಇಲ್ಲಿಯ ನಿವಾಸಿಗರ ಕುಂದು ಕೊರತೆಗಳನ್ನು ಆಲಿಸಿದ ಪಿಡಿಎನ್ಎ ಭ್ರಷ್ಟಾಚಾರ ನಿಗ್ರಹದಳದ ರಾಷ್ಟ್ರೀಯ ಕಾರ್ಯಧ್ಯಕ್ಷ ಅಬ್ದುಲ್ ಎಂಎಂ ಕಳೆದ ಹತ್ತು ವರ್ಷಗಳಿಂದ ನಿಂಗೇಗೌಡ ಬಡಾವಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ

ಹಾಗೂ ಮುಂದಿನ ದಿನಗಳಲ್ಲಿ ಇಲ್ಲಿ ನಡೆದಿರುವ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಇದರ ಬಗ್ಗೆ ಸೂಕ್ತ ತನಿಖೆ ಮಾಡುವ ಭರವಸೆಯನ್ನು ಕೊಟ್ಟಿರುತ್ತಾರೆ
ಈ ಸಂದರ್ಭದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ನ ಕುಶಾಲನಗರ ವಲಯದ ನಿಕಟಪೂರ್ವ ಅಧ್ಯಕ್ಷರಾದ ಭವಾನಿ ಲೋಕೇಶ್ ಸಮಾಜ ಸೇವಕರಾದ ಸಾಹುಲ್, ಹನೀಫ್ ಹಾಗೂ ಸ್ಥಳೀಯ ನಿವಾಸಿಗಳಾದ
ಲೋಕೇಶ್, ವಿಜಿ ,ನೂರಿ, ಗಾಯಿತ್ರಮ್ಮ ಮಾತನಾಡಿ ಮುಂದಿನ 10 ದಿನದೊಳಗೆ ಪುರಸಭೆಯವರು ಹಾಗೂ ಇಲ್ಲಿಯ ಚುನಾಯಿತ ಅಭ್ಯರ್ಥಿಗಳು ರಸ್ತೆ ಕಾಮಗಾರಿ ಹಾಗೂ ಒಳ ಚರಂಡಿ ವ್ಯವಸ್ಥೆ ಕರೆಂಟ್ ವ್ಯವಸ್ಥೆ ಮಾಡಿಕೊಡದಿದ್ದಲ್ಲಿ ಪುರಸಭೆ ಕಾರ್ಯಾಲಯ ಮುಂದೆ ತಮ್ಮ ಹಕ್ಕನ್ನು ಪಡೆಯಲು ಹೋರಾಟ ಮಾಡುತ್ತವೆ ಎಂಬ ಎಚ್ಚರಿಕೆ ನೀಡಿದ್ದಾರೆ..

Related Articles

Leave a Reply

Your email address will not be published. Required fields are marked *

Back to top button
error: Content is protected !!