ಕುಶಾಲನಗರ, ಅ. 21: ಸೋಮವಾರಪೇಟೆ ಕಡೆಯಿಂದ ಕೂಡಿಗೆಗೆ ಬರುತ್ತಿದ ಕಾರು ಚಾಲಕ ನಿಯಂತ್ರಣ ತಪ್ಪಿ ಹುದುಗೂರು ಸಮೀಪದಲ್ಲಿ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯುತ್ ಕಂಬ ಮುರಿದು ಚಾಲಕ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಕಾರು ವಿದ್ಯುತ್ ಕಂಬಕ್ಕೆ ಹೊಡೆದ ಪರಿಣಾಮ ಕಂಬ ತಂಡಾಗಿ ಕಾರು ರಸ್ತೆಯ ಬದಿ ಚರಂಡಿಗೆ ಇಳಿದಿದೆ. ಚಾಲಕ ಜೋಯಪ್ಪ ಎಂಬವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಡಿಕ್ಕಿಯಾದ ಕಾರನ್ನು ಎತ್ತಿ ರಕ್ಷಣೆ ಮಾಡಲಾಗಿದೆ.
Back to top button
error: Content is protected !!