ನಿಧನ

ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ್ದ ಯುವಕ ಸಾವು

ಕುಶಾಲನಗರ, ಅ 05: ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ್ದ ಯುವಕ ಮುಳುಗಿ ಮೃತಪಟ್ಟ ಘಟನೆ ಹುದುಗೂರು ಬಳಿ ನಡೆದಿದೆ.

ಕೂಡಿಗೆ ಬಸವರಾಜು ಎಂಬವರ ಪುತ್ರ ಹಾಲು ವಾಹನ ಚಾಲಕ ಸಂತೋಷ (28) ಮೃತ ದುರ್ದೈವಿ. ಹುದುಗೂರಿನಲ್ಲಿ ಮೃತಪಟ್ಟ ಸಂಬಂಧಿಕರ ಅಂತಿಮ ದರ್ಶನ ಪಡೆದು ಬಂದ ಬಳಿಕ ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದಾಗ ದುರ್ಘಟನೆ ಸಂಭವಿಸಿದೆ.

ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ನಾಲೆಯಲ್ಲಿ ನೀರು ಸರಬರಾಜು ಸ್ಥಗಿತಗೊಳಿಸಿದ್ದ ಅಗ್ನಿಶಾಮಕ ದಳ ಮೃತದೇಹ ಶೋಧ ಕಾರ್ಯ ನಡೆಸುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!