ಕ್ರೀಡೆ

ಸೈನಿಕ ಶಾಲೆ ಕೊಡಗು:ರಿವರ್ ರಾಫ್ಟಿಂಗ್ ಸಹಯೋಗದಲ್ಲಿ ನದಿ ರಾಫ್ಟಿಂಗ್ ತರಬೇತಿ ಶಿಬಿರ

ಕೂಡಿಗೆ, ೨೬ ಸೆಪ್ಟೆಂಬರ್ ೨೦೨೫ – ಸೈನಿಕ ಶಾಲೆ ಕೊಡಗಿನ ಕೆಡಟ್‌ಗಳು ಮತ್ತು ಸಿಬ್ಬಂದಿಗಾಗಿ ಕಾವೇರಿ ಮತ್ತು ರ‍್ಪೋಳೆ ನದಿಗಳಲ್ಲಿ ಸೆಪ್ಟೆಂಬರ್ ೨೦ ರಿಂದ ೨೬ ರವರೆಗೆ ರೋಚಕವಾದ ಏಳು ದಿನಗಳ ರಿವರ್ ರಾಫ್ಟಿಂಗ್ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಈ ಕರ‍್ಯಕ್ರಮವು ಶಾಲಾ ಸಮುದಾಯಕ್ಕೆ ವೈಟ್‌-ವಾಟರ್ ರಾಫ್ಟಿಂಗ್ ಕ್ರೀಡೆಯ ಮೊದಲ ಅನುಭವವನ್ನು ಒದಗಿಸಿತು. ಈ ತರಬೇತಿಯನ್ನು ರ‍್ನಲ್ ಬಿ. ಎನ್. ಝಾ ಅವರ ನೇತೃತ್ವದ ೪೮ ಸದಸ್ಯರ ರ‍್ಮಿ ರಾಫ್ಟಿಂಗ್ ಘಟಕ ನಡೆಸಿತು. ಅಂತರಾಷ್ಟ್ರೀಯ ಅನುಭವ ಮತ್ತು ಕರ‍್ಯನೈಪುಣ್ಯಕ್ಕಾಗಿ ಖ್ಯಾತಿ ಪಡೆದಿರುವ ಈ ಘಟಕವು ಪ್ರಸ್ತುತ ತನ್ನ ರಾಷ್ಟ್ರೀಯ ತರಬೇತಿ ಕರ‍್ಯಕ್ರಮದ ದಕ್ಷಿಣ ಭಾರತದ ಹಂತವನ್ನು ಕೈಗೊಂಡಿದೆ. ಲೆಫ್ಟಿನೆಂಟ್ ರ‍್ನಲ್ ಸಚಿನ್ ಟಿ. ನಿಕಮ್, ಲೆಫ್ಟಿನೆಂಟ್ ರ‍್ನಲ್ ಎಡ್ವಿನ್ ಲಿಂಕೆನ್, ಮೇಜರ್ ಆರ್. ಅಭಿಷೇಕ್, ಸುಭಾದರ್ ಅಬ್ರಹಾಂ, ಸುಬೆದಾರ್ ಶಿವಕುಮಾರ್, ನಾಯಬ್ ಸುಭಾದರ್ ಪಿ. ಮೊಹಾಪಾತ್ರ ಹಾಗೂ ನಾಯಬ್ ಸುಬೆದಾರ್ ರವಿ ಡಿ.ಆರ್. ಸೇರಿದಂತೆ ೪೮ ಸದಸ್ಯರ ತಂಡಕ್ಕೆ ಸೈನಿಕ ಶಾಲೆ ಕೊಡಗು ಕ್ಯಾಂಪಸ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಕೇರಳದಲ್ಲಿ ತರಬೇತಿ ಹಂತಗಳನ್ನು ಪರ‍್ಣಗೊಳಿಸಿರುವ ಈ ಘಟಕವು ಈಗ ರ‍್ನಾಟಕದಲ್ಲಿ ಶಿಬಿರವನ್ನು ಹೂಡಿದೆ.

ಶಾಲೆಯ ಮೂರು ಜನ ಅಧಿಕಾರಿಗಳು, ೧೮ ಸಿಬ್ಬಂದಿಗಳು (೧೩ ಪುರುಷರು ಮತ್ತು ೫ ಮಹಿಳೆಯರು) ಸೇರಿದಂತೆ ೧೪೧ ವಿದ್ಯರ‍್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿದರು. ಕಾವೇರಿ ನದಿಯಲ್ಲಿ ನಡೆದ ಈ ತರಬೇತಿಯಲ್ಲಿ ಮುಖ್ಯವಾದ ರಾಫ್ಟಿಂಗ್ ತಂತ್ರಗಳು, ನದಿ ಸುರಕ್ಷತಾ ನಿಯಮಗಳು ಮತ್ತು ತಂಡ ಆಧಾರಿತ ಜಲ ಕ್ರೀಡಾ ಚಟುವಟಿಕೆಗಳ ಮೂಲಕ ನಾಯಕತ್ವದ ಗುಣಗಳನ್ನು ಕಲಿಸಿ ಕೊಡಲಾಯಿತು. ಶಾಲೆಯ ಅಧಿಕಾರಿಗಳಾದ ರ‍್ನಲ್ ಅಮರಫ್ ಜೀತ್ ಸಿಂಗ್ (ಪ್ರಿನ್ಸಿಪಾಲ್), ವಿಂಗ್ ಕಮಾಂಡರ್ ಪ್ರಕಾಶ್ ರಾವ್ (ಅಡ್ಮಿನಿಸ್ಟ್ರೇಟಿವ್ ಆಫೀಸರ್) ಮತ್ತು ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ (ವೈಸ್ ಪ್ರಿನ್ಸಿಪಾಲ್) ಅವರು ಈ ತರಬೇತಿ ಅಧಿವೇಶನಗಳನ್ನು ಸ್ವತಃ ವೀಕ್ಷಿಸಿ ರ‍್ಮಿ ರಾಫ್ಟಿಂಗ್ ಘಟಕದ ವೃತ್ತಿಪರತೆಯನ್ನು ಹಾಗೂ ಕೆಡಟ್‌ಗಳ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶಿಬಿರವು ಕೆಡಟ್‌ಗಳಿಗೆ ರೋಚಕ ಸಾಹಸ ಕ್ರೀಡೆಯ ಪರಿಚಯ ನೀಡಿದಷ್ಟೇ ಅಲ್ಲದೆ, ಧರ‍್ಯ, ಸಹನೆ ಮತ್ತು ತಂಡ ಭಾವನೆಯಂತಹ ಮಹತ್ವದ ಜೀವನ ಕೌಶಲ್ಯಗಳನ್ನು ಬೆಳೆಸಿತು. ಅಂತರಾಷ್ಟ್ರೀಯ ಅನುಭವ ಹೊಂದಿರುವ ರ‍್ಮಿ ಘಟಕದೊಂದಿಗೆ ತರಬೇತಿ ಪಡೆಯುವ ಅವಕಾಶವು ಪ್ರತಿಯೊಬ್ಬರಿಗೂ ಅದ್ಬುತ ಸುರ‍್ಣವಾಕಾಶವನ್ನು ಹಾಗೂ ಪ್ರೇರಣಾದಾಯಕ ಅಧ್ಯಯನ ವಾತಾವರಣವನ್ನು ಒದಗಿಸಿತು. ಸೈನಿಕ ಶಾಲೆ ಕೊಡಗು, ರ‍್ನಲ್ ಬಿ. ಎನ್. ಝಾ ಮತ್ತು ಸಂಪರ‍್ಣ ರ‍್ಮಿ ರಾಫ್ಟಿಂಗ್ ಘಟಕಕ್ಕೆ, ಅವರ ಅದ್ಭುತ ಕೊಡುಗೆ, ಮರ‍್ಗರ‍್ಶನ ಮತ್ತು ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿತು ಅವರ ಸಾನ್ನಿಧ್ಯ ಮತ್ತು ಮರ‍್ಗರ‍್ಶನವು ಕೆಡಟ್‌ಗಳು ಮತ್ತು ಸಿಬ್ಬಂದಿಗಳ ಮೇಲೆ ಅಪಾರವಾದ ಪ್ರಭಾವನ್ನು ಬೀರಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!