ಕುಶಾಲನಗರ, ಸೆ 22: ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕಮಹಾಸಭೆ ಸಂಘದ ಕಛೇರಿ ಆವರಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಮಧುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ
ಹಾಸನ ಹಾಲು ಒಕ್ಕೂಟದ ನಿರ್ದೇಶಕರಾದ ಕೆ.ಕೆ.ಹೇಮಂತ್ ಕುಮಾರ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಂಘ ಸ್ಥಾಪನೆಯಾಗಿ 10ನೇ ವರ್ಷಕ್ಕೆ ಸ್ವಂತ ನಿವೇಶನ ಖರೀದಿಸಿ ನೂತನ ಕಟ್ಟಡ ನಿರ್ಮಿಸಿದ್ದು ಪ್ರಸಕ್ತ ಸಾಲಿನಲ್ಲಿ ರೂ 2 ಲಕ್ಷ ಆದಾಯ ಗಳಿಸಿರುವ ಬಗ್ಗೆ ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ವಿಸ್ತರಣಾಧಿಕಾರಿ ವೀಣಾ, ಸಂಘದ ಉಪಾಧ್ಯಕ್ಷ ಎಂ.ಎಸ್.ಪ್ರಸನ್ನ, ನಿರ್ದೇಶಕರಾದ ಎಂ.ಎಂ.ಪ್ರಕಾಶ್, ಪ್ರದೀಪ, ದಿವಾಕರ, ಶಿವಕುಮಾರ್, ರುದ್ರೇಶ್, ನವೀನ, ಜಿ.ಎಲ್.ಸೋಮಣ್ಣ, ಕಮಲಮ್ಮ, ಉಷಾ, ಕಾರ್ಯದರ್ಶಿ ಮಂಜುನಾಥ್, ಹಾಲು ಪರೀಕ್ಷಕಿ ಸುಜಾತ ಹಾಗೂ ಸರ್ವ ಸದಸ್ಯರು ಇದ್ದರು.
Back to top button
error: Content is protected !!