ಕುಶಾಲನಗರ, ಸೆ. 2: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಬ್ಬಿನಗದ್ದೆಯ ಹಾಡಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಭೇಟಿ ನೀಡಿ ಶುಚಿತ್ವ, ಮತ್ತು ಮಕ್ಕಳ ಹಾಜರಾತಿ, ಸೇರಿದಂತೆ ಸ್ಧಳದ ಬಗ್ಗೆ ಪರಿಶೀಲನೆ ನಡೆಸಿದರು.
ಗ್ರಾಮ ಪಂಚಾಯತಿ ವತಿಯಿಂದ ಈಗಾಗಲೇ ಮಕ್ಕಳಿಗೆ ಅನುಕೂಲವಾಗುವ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಜೊತೆಯಲ್ಲಿ ಈ ಸಾಲಿನಲ್ಲಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ, ಮತ್ತು ವಿವಿಧ ಬಗೆಯ ಪೀಠೋಪಕರಣ ಒದಗಿಸುವದರ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ, ಸೇರಿದಂತೆ ಸಹಾಯಕಿ ಇದ್ದರು.
Back to top button
error: Content is protected !!