ಆರೋಪ

ಸಮರ್ಕಪವಾಗಿ ಮುಚ್ಚದ ರಸ್ತೆ ಗುಂಡಿ, ಸಂಚಾರ ಅಸ್ತವ್ಯಸ್ಥ ಆರೋಪ

ಕುಶಾಲನಗರ, ಆ 25:ಗುಡ್ಡೆಹೊಸೂರು- ಸಿದ್ದಾಪುರ ಮುಖ್ಯರಸ್ತೆ ನಂಜರಾಯಪಟ್ಟಣ ಹೊಸಪಟ್ಟಣ ರಸ್ತೆಗುಂಡಿ ಮುಚ್ಚುವ ಕಾಮಗಾರಿಯು ಲೋಕೋಪಯೋಗಿ ಇಲಾಖೆ  ಬೇಕಾಬಿಟ್ಟಿಯಾಗಿ ಮಾಡಿದೆ. ಈ ಕಳಪೆ ಕಾಮಗಾರಿಗೆ ಸಾರ್ವಜನಿಕರು ಸಂಚಾರ ಮಾಡಲು ಪರಿತಪಿಸುವ ಇಕ್ಕಟ್ಟಿನ ಪರಿಸ್ಥಿತಿ ಬಂದೊದಗಿದೆ. ನೆನ್ನೆ ಹಾಕಿದಂತ ಜಲ್ಲಿ ಇಂದು ರಸ್ತೆಯಿಡಿ ಚೆಲ್ಲಿ ಬೈಕ್ ಸವಾರರು ಅಪಘಾತದ ಭಯಬೀತಿಯಿಂದ ಬೈಕ್ ಚಲಿಸುವಂತಾಗಿದೆ.ರಸ್ತೆಯಲ್ಲಿ ನಡೆದಾಡಲು ಸಾರ್ವಜನಿಕರಿಗೆ ಈ ಜಲ್ಲಿಯಿಂದ ತೊಂದರೆಯಾಗಿ ಪರಿಣಮಿಸಿದೆ. ಬರೀ ಜಲ್ಲಿ ಹಾಕಿ ಗುಂಡಿ ಮುಚ್ಚಿದ್ದು ಯಾವ ಮಟ್ಟಿಗೆ ಸರಿ??? ಸರಕಾರದ ಹಣ ದುರುಪಯೋಗ ಮಾಡಿದ ತಪ್ಪಿತಸ್ಥ ಇಲಾಖೆ ಕೂಡಲೇ ಕ್ರಮಗೊಂಡು ಗುಣಮಟ್ಟದ ಕಾಮಗಾರಿ ಮಾಡಿ ನಂಜರಾಯಪಟ್ಟಣ ಹೊಸಪಟ್ಟಣ ರಂಗಸಮುದ್ರ ಬಾಳುಗೋಡು ಉದ್ದಕ್ಕೂ ರಸ್ತೆ ಸರಿಪಡಿಸಿ ಕೊಡಬೇಕಾಗಿದೆ ಎಂದು ದರ್ಶನ್ ಹೊಸೊಕ್ಲು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!