ಕುಶಾಲನಗರ ಸೆ 22:ಭಾರತೀಯ ಸಂಸ್ಕೃತಿಯಲ್ಲಿ ಹಸಿರು ಗಾಜಿನ ಬಳೆಗೆ ಬಹಳಷ್ಟು ಮೌಲ್ಯವಿದೆ. ಬಳೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಯಾವುದೇ ಮಹಿಳೆ ಎಷ್ಟೇ ಅಲಂಕಾರ ಮಾಡಿಕೊಂಡರು ಬಳೆ ಇಲ್ಲದೆ ಸಂಪೂರ್ಣವಾಗುವುದಿಲ್ಲ ಎನ್ನುವ ಭಾವನೆ ಇರುತ್ತೆ ಎಂದು ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಅನುಷಾ ಅರ್ಜುನ್ ಹೇಳಿದರು.
ವಾಸವಿ ಯುವತಿಯರ ಸಂಘದ ನೇತೃತ್ವದಲ್ಲಿ ಗುರುವಾರ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾದಲ್ಲಿ ಮುತ್ತೈದೆಯರಿಗೆ ಹಸಿರು ಬಳೆ ತೊಡಿಸುವ ಮೂಲಕ ಗೌರಿ ಹಬ್ಬವನ್ನು ಆಚರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದೂ ಸನಾತನ ಧರ್ಮದ ಪ್ರಕಾರ ಬಳೆ ಮುತ್ತೈದೆಯರಿಗೆ ಭೂಷಣ. ಮನೆಯಲ್ಲಿ ಇರುವ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರರು ಗಾಜಿನ ಬಳೆ ತೊಟ್ಟು ಸಂಭ್ರಮಿಸುವುದನ್ನು ಕಾಣುತ್ತೇವೆ. ಬಲೆಯ ನಾದವನ್ನು ಗಂಡಸರು, ಮಕ್ಕಳು ಕೂಡ ಆನಂದಿಸುತ್ತಾರೆ. ಅಂತಹ ಶ್ರೇಷ್ಠ ಆಚರಣೆಯನ್ನು ಇಂದಿನ ಯುವಪೀಳಿಗೆಯ ಯುವತಿಯರಲ್ಲಿ ಅರಿವು ಮೂಡಿಸುವುದು ಕೂಡ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಆರ್ಯವೈಶ್ಯ ಮಹಿಳೆಯರು ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು.
ಬಳೆಗಾರ ರಮೇಶ್ ದಂಪತಿ ಎಲ್ಲಾ ಮಹಿಳೆಯರಿಗೂ ಬಳೆ ತೊಡಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.
ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವತಿಯರ ಸಂಘದ ಉಪಾಧ್ಯಕ್ಷೆ ಅಶ್ವಿನಿ, ಕಾರ್ಯದರ್ಶಿ ಹೇಮಾ, ಸಹ ಕಾರ್ಯದರ್ಶಿ ಶ್ರಾವಣಿ, ಖಜಾಂಚಿ ಸಿಂಧೂ, ಸಾಂಸ್ಕೃತಿಕ ಕಾರ್ಯದರ್ಶಿ ರಂಜಿತಾ, ಕ್ರೀಡಾ ಕಾರ್ಯದರ್ಶಿ ಸಹನಾ, ಪದಾಧಿಕಾರಿಗಳಾದ ಕಾವ್ಯ, ಮಾಘ, ಲಕ್ಷ್ಮೀ, ಸೌಮ್ಯ, ನಾಗ ಜ್ಯೋತಿ, ಸ್ನೇಹ, ಕುಸುಮಾ, ಪ್ರತಿಮಾ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.
Back to top button
error: Content is protected !!