ಶಿಕ್ಷಣ

ಕುಶಾಲನಗರ ರೋಟರಿಯಿಂದ ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಜರ್ಸಿ ವಿತರಣೆ

ಕುಶಾಲನಗರ, ಆ 21:
ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಜರ್ಸಿಗಳನ್ನು ಕುಶಾಲನಗರ ರೋಟರಿ ವತಿಯಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಮನು ಪೆಮ್ಮಯ್ಯ ಮಾತನಾಡಿ, “ಮಕ್ಕಳು ಕ್ರೀಡೆಗೆ ನೀಡುವ ಮಹತ್ವ ಅತ್ಯಂತ ಶ್ಲಾಘನೀಯವಾದದ್ದು. ಮಕ್ಕಳು ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕ್ರೀಡೆ ಮಾತ್ರವಲ್ಲದೆ ವಿದ್ಯಾಭ್ಯಾಸಕ್ಕೂ ಸಮಾನ ಆದ್ಯತೆ ನೀಡಬೇಕು. ಇಂತಹ ಪ್ರೋತ್ಸಾಹ ಕಾರ್ಯಗಳಿಗೆ ರೋಟರಿ ಸದಾ ಬೆಂಬಲ ನೀಡುತ್ತದೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಉಲ್ಲಾಸ್ ಕೃಷ್ಣ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ್, ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ, ಶಿಕ್ಷಕಿ ಕವಿತಾ, ದಿವ್ಯಾ ಹಾಗೂ ಅತಿಥಿ ಶಿಕ್ಷಕಿ ಶಶಿಕಲಾ ಹಾಜರಿದ್ದರು.

ಶಿಕ್ಷಕಿ ಜಲಜಾಕ್ಷಿ ಅತಿಥಿಗಳನ್ನು ಬರಮಾಡಿಕೊಂಡರು. ದೈಹಿಕ ಶಿಕ್ಷಣ ಶಿಕ್ಷಕಿ ವಿಜಯಲಕ್ಷ್ಮಿ ವಂದನೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!