ಕುಶಾಲನಗರ, ಆ 17: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.) ಕೊಡಗು ಜಿಲ್ಲೆ. ಇವರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ *ಜಿಲ್ಲಾ ಮಟ್ಟದ ಕವಿಗೋಷ್ಠಿ* ಕಾರ್ಯಕ್ರಮವನ್ನು ಕುಶಾಲನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಒಳಚರಂಡಿ ಅಭಿವೃದ್ಧಿ ನಿಗಮ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಕೆ.ಪಿ. ಚಂದ್ರಕಲಾ ರವರು ಗಿಡಕ್ಕೆ ನೀರು ಹಾಕುವ ಮೂಲಕ ನೆರವೇರಿಸಿ ಮಾತನಾಡುತ್ತಾ,ರಘು ರವರು ಸೃಷ್ಟಿ ಮಾಡಿದ ಈ ಕಾರ್ಯಕ್ರಮ ಎಲ್ಲಾ ಕವಿಗಳಿಗೆ ಸ್ಪೂರ್ತಿ ದಾಯಕ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ದಿನನಿತ್ಯ ಹಲವರು ಪ್ರತಿಭೆಗಳು ಹೊರ ಹೊಮ್ಮುತ್ತಿದ್ದಾರೆ,ಈ ಕಲೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಚಂದ್ರಕಲಾ ರವರು ಕಿವಿ ಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.) ಕೊಡಗು ಜಿಲ್ಲಾಧ್ಯಕ್ಷರಾದ ಡಾ.ಹೆಚ್.ಎಂ. ರಘು ಕೋಟಿ ರವರು ವಹಿಸಿ ಮಾತನಾಡಿ, ತಮ್ಮ ಪ್ರತಿಭೆ ಹೊರ ಹೊಮ್ಮಲು ಯಾವುದೇ ಪದವಿಗಳ ಅವಶ್ಯಕತೆ,ಇಲ್ಲ ಅದು ಸ್ತುಪ್ತ ಮನಸಿನಿಂದ ಹೊರ ಹೊಮ್ಮಿ ಜಗತ್ತಿಗೆ ಅನಾವರಣಗೊಳ್ಳುತ್ತದೆ, ತಮಗೊಲಿದ ಕಲೆಯನ್ನು ನಿಷ್ಠೆಯಿಂದ ಸದುಪಯೋಗ ಕೊಳ್ಳಬೇಕೆಂದು ರಘು ಕೋಟಿ ರವರು ಉಚ್ಚರಿಸಿದರು. , ಹಿರಿಯ ಸಾಹಿತಿಗಳಾದ ಭಾರದ್ವಾಜ್.ಕೆ. ಅನಂತ ತೀರ್ಥರವರು ಸಾಹಿತ್ಯದ ನುಡಿಗಳನ್ನು ನುಡಿದರು, ಕಾವ್ಯ ಕವಿತೆ ಯಲ್ಲಿ ಆಸಕ್ತಿ ಇರುವವರು ಪ್ರಾಸ ಬದ್ಧವಾಗಿ ಕಲಿಕಾ ಮಾರ್ಗವನ್ನು ಅನುಸರಿಸಬೇಕು ಎಂದು ಹಿರಿಯ ಸಾಹಿತಿ ಭಾರದ್ವಾಜ್ ರವರು ನೆರೆದಿದ್ದ ಕವಿಗಳಿಗೆ ಮತ್ತು ಸಾಹಿತ್ಯ ಪ್ರಿಯರಿಗೆ ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ರಾಣಿ ರವೀಂದ್ರ, ಸಂಚಾಲಕರಾದ ಮಹೇಂದ್ರರವರು ಉಪಸ್ಥಿತರಿದ್ದರು.ಹಾಗೂ ಕವಿ ಗೋಷ್ಠಿಯಲ್ಲಿ 20 ಕ್ಕೂ ಹೆಚ್ಚು ಕವಿಗಳು, ಪಾಲ್ಗೊಂಡಿದ್ದರು.
Back to top button
error: Content is protected !!