ಕುಶಾಲನಗರ, ಆ 17: ಸಿ ಐ ಎಸ್ ಸಿ ಇ ಕರ್ನಾಟಕ -ಗೋವಾ ರಾಜ್ಯಗಳ ಪ್ರಾದೇಶಿಕ ಮಟ್ಟದ 2025-26ರ ಟೆನ್ನಿಸ್ ಪಂದ್ಯಾವಳಿಯು ಆಗಸ್ಟ್ 13 ರಿಂದ 15ನೇ ತಾರೀಕಿನ ವರೆಗೆ, ನಳಂದ ಗುರುಕುಲ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆಯಿತು.ಬೆಂಗಳೂರು, ತುಮಕೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಮೈಸೂರು, ಕೊಡಗು ರಾಜ್ಯಗಳನ್ನು ಒಳಗೊಂಡಂತೆ 8 ವಲಯಗಳ, 29 ಶಾಲೆಗಳಿಂದ,85 ಸ್ಪಧಿ೯ಗಳು ಭಾಗವಹಿಸಿದ್ದರು.ನವದೆಹಲಿಯಲ್ಲಿರುವ ರಾಷ್ಟ್ರೀಯ ಟೆನ್ನಿಸ್ ಅಕಾಡೆಮಿಯ ಮಾಜಿ ನಿದೇ೯ಶಕರಾದ ಮೈಸೂರಿನವರಾದ ಶ್ರೀ ಎಂ. ಜೆ. ಚರಣ್ ರವರು ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಳಂದ ಸಂಸ್ಥೆಯ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು .ಬಾಲಕರು ಮತ್ತು ಬಾಲಕಿಯರ ಟೆನ್ನಿಸ್ ಪಂದ್ಯಾವಳಿಯನ್ನು ಕ್ರಮವಾಗಿ 14, 17 ಮತ್ತು 19 ವಷ೯ಗಳೊಳಗಿನ ವಿಭಾಗಗಳಲ್ಲಿ ನಡೆಸಲಾಯಿತು.ನಳಂದ ಸಂಸ್ಥೆಯ ಚೇರ್ಮನ್ ರವರಾದ ಶ್ರೀ ಎನ್ ಸಾತಪ್ಪನ್ ರವರು, ಶ್ರೀಮತಿ ಕವಿತಾ ಸಾತಪ್ಪನ್ ರವರು,ನಿಲಯ ನಿರ್ದೇಶಕರಾದ ನಾಮಗೆಲ್ ನುಡುಪ್ ರವರು, ಸಲಹೆಗಾರರಾದ ಸುರೇಂದರ್ ರವರು, ನಳಂದ ಗುರುಕುಲ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಡಾ. ಸಿ. ಅಂತೋಣಿ ರಾಜ್ ರವರು ಮತ್ತು ನಳಂದ ಇಂಟರ್ನ್ಯಾಷನಲ್ ಇಂಡಿಪೆಂಡೆಂಟ್ ಪ್ರಿ ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಷಾಜಿ ಅಲೂಂಗಲ್ ಜೋಸೆಫ್ ರವರ ಸಮ್ಮುಖದಲ್ಲಿ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ವಿಜೇತರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ನೀಡಿ ಸನ್ಮಾನಿಸಲಾಯಿತು.
ಈ ಪಂದ್ಯಾವಳಿಯನ್ನು ಶಾಲೆಯ ಪ್ರಾಂಶುಪಾಲರು, ಟೆನ್ನಿಸ್ ತರಬೇತುದಾರರಾದ ಶ್ರೀ ಆದರ್ಶ್ ರವರು, ಆಡಳಿತ ಅಧಿಕಾರಿಯಾದ ಓಂ ಪ್ರಕಾಶ್ ರವರು, ಸಂಯೋಜಕರಾದ ಕೃಪಾರವರು, ದೈಹಿಕ ಶಿಕ್ಷಕರು, ಶಾಲೆಯ ಈವೆಂಟ್ ಮ್ಯಾನೇಜರ್ಸ್ ಗಳಾದ ರೆಣ್ಯ ಮತ್ತು ಇಂದುಶ್ರೀ, ಆಫೀಸಿನ ನಿರ್ವಾಹಕರಾದ ಫುನ್ಸುಕ್, ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಯಶಸ್ವಿಯಾಗಿ ನಡೆಸಿಕೊಟ್ಟರು.
Back to top button
error: Content is protected !!