ಕುಶಾಲನಗರ, ಆ. 13: ಜಿಲ್ಲೆಯಲ್ಲಿ ಪ್ರಥಮವಾಗಿ ಚೀನಾ ದೇಶದ ಭತ್ತದ ತಳಿಯಾದ ಸುಗಂಧ ಭರಿತ ಭತ್ತದ ತಳಿಯ ಬೆಳೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಪ್ರಗತಿಪರ ರೈತ ಹೆಚ್. ಎನ್. ಕಪನಪ್ಪ ನವರು ತಮ್ಮ ಜಮೀನಿನಲ್ಲಿ ಸಾವಯವ ಗೊಬ್ಬರದ ಬಳಕೆಯನ್ನೇ ಮಾಡಿಕೊಂಡು ಸುಗಂಧ ಭರಿತ( ಬರ್ಮಾ ಬ್ಲಾಕ್ ರೈಸ್) ಭತ್ತದ ತಳಿಯ ಮಾಡಿರುತ್ತಾರೆ.
ವಿದೇಶಿ ಭತ್ತದ ಬೆಳೆಯ ತಳಿಯನ್ನು ಉತ್ತರ ಭಾರತದಲ್ಲಿ ಹೆಚ್ಚು ಬೆಳೆಯುತ್ತಿದ್ದಾರೆ. ಈ ಬೆಳೆಯ ಅಕ್ಕಿಯು ಸುಗಂಧ ಭರಿತ ವಾದ ಹಿನ್ನೆಲೆಯಲ್ಲಿ ವಿಶೇಷ ಸಭೆ, ಸಮಾರಂಭದ ಭೋಜನದ ವ್ಯವಸ್ಥೆ ಬಳಕೆಯಾಗುತ್ತಿದೆ. ಈ ಸುಗಂಧ ಭರಿತ ಅಕ್ಕಿ ಅನ್ನವು ಸಹ ಕಪ್ಪುಗಿರುತ್ತದೆ.
ಸುಗಂಧ ಭರಿತ ಭತ್ತ (ಬರ್ಮಾ ಬ್ಲಾಕ್) ನ ಭತ್ತ ಮಾತ್ರ ದೇಶೀಯ ಭತ್ತದ ಬಣ್ಣದಲ್ಲಿದರೂ ಸಹ ಅದರ ಅಕ್ಕಿ ಮಾತ್ರ ಕಪ್ಪು ಬಣ್ಣದಾಗಿ ಸುಗಂಧ ಭರಿತವಾಗಿ ವಾಸನೆ ಬರುತ್ತಿರುತ್ತದೆ. ಅದೇ ಕಪ್ಪು ಅಕ್ಕಿಯನ್ನು ಬಳಕೆ ಮಾಡಿದರೆ ಅನ್ನವು ಸಹ ಕಪ್ಪುಗಿರುತ್ತದೆ.
ಈ ಬೆಳೆಯನ್ನು ಹುಲುಸೆ ಗ್ರಾಮದ ರೈತ ಕಪನಪ್ಪ ನವರು ಕಳೆದ 6. ಈ ಬೆಳೆಯನ್ನು ಬೆಳೆಯುತ್ತಿದ್ದು, ಬಿತ್ತನೆ ಬೀಜವನ್ನು ಮಣಿಪುರಂ ರಾಜ್ಯದ ಮೂಲಕ ತರಿಸಿಕೊಂಡು ಸಸಿಮಡಿಗಳನ್ನು ಸಿದ್ದತೆ ಮಾಡಿ ಸಾವಯವ ಗೊಬ್ಬರ ಮಾತ್ರ ಬಳಕೆ ಮಾಡುವ ಮೂಲಕ ನಾಟಿ ಕಾರ್ಯವನ್ನು ಮಾಡಿರುತ್ತಾರೆ.
ಹುಲುಸೆ ಗ್ರಾಮದ ರೈತ ತಾನು ಈ ಬೆಳೆಯನ್ನು ಬೆಳೆಯುವುದರ ಜೊತೆಯಲ್ಲಿ ಸಮೀಪದ ಜಮೀನಿನ ರೈತರಿಗೂ ಪರಿಚಯಿಸಿದ ಹಿನ್ನೆಲೆಯಲ್ಲಿ 13. ಎಕರೆಗಳಷ್ಟು ಪ್ರದೇಶದಲ್ಲಿ ಈ ಸಾಲಿನಲ್ಲಿ ಭತ್ತದ ನಾಟಿ ಕಾರ್ಯವನ್ನು ಮಾಡಲಾಗಿದೆ.
ಭತ್ತ ಮಾದರಿ ಯಲ್ಲೇ ಸ್ಥಿತಿಯಲ್ಲಿ ಇದರೂ ಸಹ ಅದರ ಅಕ್ಕಿ ಮಾತ್ರ ಕಪ್ಪು ಅಗಿರುತ್ತದೆ. ಇದರ ಬೇಸಾಯಕ್ಕೆ ವಿಶೇಷವಾಗಿ ಸಾವಯವ ಗೊಬ್ಬರದ ಜೊತೆಯಲ್ಲಿ ಭತ್ತದ ಗದ್ದೆಗಳಲ್ಲಿ ನಾಟಿ ಮಾಡುವ ರೈತರು ನಾಲೆಯ ನೀರು ಬಳಕೆ ಮಾಡದೆ,ಸ್ವಂತ ಕೊಳವೆ ಬಾವಿಗಳಿಂದ ನೀರು ಬಳಕೆ ಮಾಡಿಕೊಂಡು ಭತ್ತದ ನಾಟಿ ಮಾಡುವ ಮೂಲಕ ಬೇಸಾಯ ಮಾಡಿರುತ್ತಾರೆ.
ಸುಗಂಧ ಭರಿತ ಭತ್ತದ ತಳಿಯು ವಿಶ್ವಸಂಸ್ಥೆಯಲ್ಲಿ ದೃಢೀಕೃತವಾಗಿ ಹೆಚ್ಚು ಪೋಷಕಾಂಶಗಳು ಹೊಂದಿರುವ ಹಿನ್ನೆಲೆಯಲ್ಲಿ ದೇಶೀಯ ರೈತ ಉತ್ಪಾದಕ ಕಂಪನಿಯ ಮುಖೇನ ಮಣಿಪುರಂ ನಿಂದ ರಾಜ್ಯದ ಬೆಂಗಳೂರಿನಲ್ಲಿರುವ ರೈತ ಉತ್ಪಾದಕ ಕಂಪನಿಯ ಮೂಲಕ ಬಿತ್ತನೆ ಬೀಜವನ್ನು ಖರೀದಿಸಿ ಈ ಸಾಲಿನಲ್ಲಿ ಸಸಿಮಡಿಗಳನ್ನು ಮಾಡಿ ನಾಟಿಮಾಡುವ ಮೂಲಕ ಬೇಸಾಯ ಮಾಡಲಾಗಿದೆ.
ಸುಗಂಧ ಭರಿತ ಭತ್ತದ ತಳಿಯ ಭತ್ತ ವನ್ನು ಬೆಳೆದ ನಂತರ ರೈತರ ಮೂಲಕ ಖರೀದಿಸುವ ಕೆಲಸವನ್ನು ಬೆಂಗಳೂರಿನ ರೈತ ಉತ್ಪಾದಕರ ಕಂಪನಿಯು ಮಾಡಲಿದೆ .ಅದಕ್ಕೆ ತಕ್ಕಂತೆ ಬೆಲೆಯು ದೊರೆಯಲಿದೆ.
ಸುಗಂಧ ಭರಿತ ಕಪ್ಪು ಅಕ್ಕಿ ಒಂದು ಕೆ.ಜೆ. 200.ರಿಂದ 300 ರೂ ವರೆಗೆ ಬೆಲೆ ಇದೆ. ಆನ್ಲೈನ್ ನಲ್ಲಿ ಇವಗ 800. ಇದೆ. ಈ ಅಕ್ಕಿಯು ಹೆಚ್ಚು ಸುಗಂಧ ವಾಗಿರುವ ಹಿನ್ನೆಲೆಯಲ್ಲಿ ಶುಭ ಸಮಾರಂಭಗಳಲ್ಲಿ ಪ್ರಮುಖ ಭೋಜನ ವ್ಯವಸ್ಥೆಗೆ ಬಳಸುತ್ತಿದ್ದಾರೆ. ಜೊತೆಯಲ್ಲಿ ನಾಟಿ ಮಾಡಿರುವ ಗದ್ದೆಗಳ ಬದುಗಳ ಮೇಲೆ ತಿರುಗಾಡುವ ಸಂದರ್ಭದಲ್ಲಿ ಈಗಾಗಲೇ ಸುಗಂಧ ಭರಿತ ವಾಸನೆ ಬರುತ್ತಿರುತ್ತದೆ. ಬೆಳೆಯು ಬೆಳೆದಂತೆಲ್ಲಾ ಹೆಚ್ಚು ಸುಗಂಧ ವಾಸನೆ ಬರುತ್ತದೆ. ಈ ಬೆಳೆಯು 165. ದಿನಗಳ ಬೆಳೆ ಅಂದರೆ 5. ವರೆ ತಿಂಗಳ ಬೆಳೆ , ಇದರ ಹುಲ್ಲು ಹಸುಗಳಿಗೆ ಉತ್ತಮವಾದ ಅಹಾರವಾಗಿರುತ್ತದೆ. ಈ ಭತ್ತದ ಬೆಳೆಯಲ್ಲಿ ಎಕರೆಗೆ 28.ರಿಂದ 30. ಕ್ವಿಂಟಾಲ್ ಇಳುವರಿ ಬರುತ್ತದೆ.
ಸಾವಯವ ಗೊಬ್ಬರ ಬಳಕೆಯಿಂದಾಗಿ ಇಳುವರಿಯು ಉತ್ತಮವಾಗಿ ಬರುವುದರಿಂದ ರೈತ ಉತ್ಪಾದಕರ ಕಂಪನಿಯು ಈ ಭತ್ತವನ್ನು ಖರೀದಿಸಿ ಅದರ ಮೂಲಕ ಆರೋಗ್ಯಕಾರವಾದ ಆಹಾರಕ್ಕೆ ಸಹಕಾರಿಯಾಗುತ್ತಿದೆ.
Back to top button
error: Content is protected !!