ಕುಶಾಲನಗರ, ಜೂ. 3: ಶಿರಂಗಾಲದಲ್ಲಿ ಹಾಸನ ಹಾಲು ಒಕ್ಕೂಟದ ವತಿಯಿಂದ ಆರಂಭಗೊಂಡಿರುವ ಹಾಲು ಶಿಥಲೀಕರಣ ಕೇಂದ್ರಕ್ಕೆ ಒಕ್ಕೂಟದ ಜಿಲ್ಲಾ ನಿರ್ದೇಶಕ, ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿರಂಗಾಲ ಹಾಲು ಶಿಥಲೀಕರಣ ಕೇಂದ್ರದಲ್ಲಿ ಈ ವ್ಯಾಪ್ತಿಯಲ್ಲಿ ಸಂಗ್ರಹವಾಗುವ 3 ಸಾವಿರ ಲೀನಷ್ಟು ಹಾಲು ಶಿಥಲೀಕರಣಗೊಂಡು ನಂತರ ಕೂಡಿಗೆ ಡೇರಿಗೆ ಸರಬರಾಜಾಗುತ್ತಿದೆ. ಸ್ಥಳೀಯ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘಗಳಿಂದ ಹೆಚ್ಚು ಹಾಲು ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಸಾಮರ್ಥ್ಯದ ನೂತನ ಶಿಥಲೀಕರಣ ಯಂತ್ರವನ್ನು ಅಳವಡಿಕೆ ಮಾಡಲು ಒಕ್ಕೂಟದ ಆಡಳಿತ ಮಂಡಳಿಯ ತೀರ್ಮಾನದ ನಂತರ ಕೈಗೊಳ್ಳಲಾಗುವುದು ಎಂದು ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೂಡಿಗೆ ಡೇರಿ ವ್ಯವಸ್ಥಾಪಕ ನಂದೀಶ್ ಮಾರುಕಟ್ಟೆ ಉಪ ವ್ಯವಸ್ಥಾಪಕ ಮಲ್ಲೇಶ್, ಸಹಾಯಕ ವ್ಯವಸ್ಥಾಪಕ ಸಂತೋಷ್, ಶಿರಂಗಾಲ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ. ಸುರೇಶ್, ನಿರ್ದೇಶಕರುಗಳಾದ ಮನುಕುಮಾರ್, ಗಂಗಾಧರ, ವಿಶಕಂಠ, ಕುಮಾರ್ ಸೇರಿದಂತೆ ರೈತರು ಹಾಜರಿದ್ದರು.
Back to top button
error: Content is protected !!