ಸಿದ್ದಾಪುರ, ಜು 13 :- ಗ್ರಾ.ಪಂ ಅನುಮತಿ ಇಲ್ಲದೆ ಅವೈಜ್ಞಾನಿಕವಾಗಿ ಕೊಳವೆ ಬಾವಿ ತೆಗೆಯಲು ಮುಂದಾದವರನ್ನು ತಡೆದ ಗ್ರಾಮಸ್ಥರು ಗ್ರಾ.ಪಂ ಅಧ್ಯಕ್ಷರು ,ಸದಸ್ಯರಿಗೆ ಕಾನೂನಿನ ಅರಿವು ನೀಡಿದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.
ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ನಲ್ವತ್ತೇಕರೆ ಬೀರನ ದೇವಸ್ಥಾನದ ಸಮೀಪದಲ್ಲಿ ಗ್ರಾ.ಪಂ ಸದಸ್ಯರೋರ್ವರು ತಮ್ಮ ಸ್ವಂತ ಜಾಗದಲ್ಲಿ ಕೊಳವೆ ಬಾವಿಯನ್ನು ತೋಡಲು ಮುಂದಾಗಿದ್ದರು. ಈ ವಿಷಯವನ್ನು ಅರಿತ ಗ್ರಾಮಸ್ಥರು ಕೊಳವೆ ಬಾವಿಯನ್ನು ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು.ಅಲ್ಲದೆ ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಕೊಳವೆ ಬಾವಿ ತೆಗೆಯಲು ಗ್ರಾಮ ಪಂಚಾಯತಿಯ ಅನುಮತಿ ಪಡೆಯದೇ ಇರುವುದು ಬೆಳಕಿಗೆ ಬಂದಿದೆ.ಅಲ್ಲದೆ ಒಂದು ಕೊಳವೆ ಬಾವಿ ಇರುವ ಜಾಗದಲ್ಲಿ ಇನ್ನೊಂದು ಕೊಳವೆ ಬಾವಿ ತೆಗೆಯಬೇಕಾದರೆ 200 ಅಡಿ ದೂರ ಇರಬೇಕೆಂಬ ನಿಯಮವನ್ನು ಮೀರಿ ಕೊಳವೆ ಬಾವಿ ತೆಗೆಯಲು ಮುಂದಾಗಿರುವುದೆಂದು ಆರೋಪಿಸಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೊಳವೆ ಬಾವಿಯನ್ನು ತೆಗೆಯುವ ಕೆಲಸವನ್ನು ಸ್ಥಗಿತಗೊಳಿಸಲಾಯಿತು. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷೆ ಧನಲಕ್ಷ್ಮೀ ಭೇಟಿ ನೀಡಿ ಪರಿಶೀಲಿಸಿದ್ದು ಗ್ರಾ.ಪಂ ಅನುಮತಿ ಇಲ್ಲದೆ ಗ್ರಾ.ಪಂ ಸದಸ್ಯರೋರ್ವರು ಅವೈಜ್ಞಾನಿಕವಾಗಿ ಕೊಳವೆ ಬಾವಿ ತೆಗೆಯಲು ಮುಂದಾಗಿರುವ ಹಿನ್ನೆಲೆಯಲ್ಲಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಗ್ರಾಮಸ್ಥರು ಗ್ರಾ.ಪಂ ಅನುಮತಿ ಇಲ್ಲದೆ ಕಾಮಗಾರಿಗಳನ್ನು ಕೈಗೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.
::::
ಸ್ಥಳೀಯ ಗ್ರಾಮ ಪಂಚಾಯತಿಯ ಸದಸ್ಯರೋರ್ವರು ಅವೈಜ್ಞಾನಿಕವಾಗಿ ,ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ ಹಾಗೂ ಮೊದಲಿದ್ದ ಸಾರ್ವಜನಿಕ ಕೊಳವೆ ಬಾವಿಯ ಸಮೀಪದಲ್ಲೇ ನೂತನ ಕೊಳವೆ ಬಾವಿ ತೆಗೆಯಲು ಮುಂದಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ.ಬೇಸಿಗೆಯಲ್ಲಿ ನೀರಿನ ಅಭಾವ ಇರುವ ಗ್ರಾಮದಲ್ಲಿ ಈ ರೀತಿ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿರುವುದು ಸರಿಯಲ್ಲ. ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕಾದ ಗ್ರಾ.ಪಂ ಸದಸ್ಯರುಗಳೇ ನಿಯಮವನ್ನು ಮೀರಿ ಕಾಮಗಾರಿಗಳನ್ನು ಮಾಡುವುದು ಸರಿಯೇ ಎಂದು ನಲ್ವತ್ತೇಕರೆ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
Back to top button
error: Content is protected !!