ಆರೋಗ್ಯ

ಕುಶಾಲನಗರದಲ್ಲಿ ಲಾರ್ವಾ ಸಮೀಕ್ಷಾ ಕಾರ್ಯ

ಕುಶಾಲನಗರ, ಜು 04: ಕುಶಾಲನಗರ ಪಟ್ಟಣದ ವಿವೇಕಾನಂದ ಬಡಾವಣೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ RRT ಲಾರ್ವಾ ಸಮೀಕ್ಷಾ ತಂಡಗಳು ಲಾರ್ವಾ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂಜ್ವರದ ಬಗ್ಗೆ ಚಿಕೂನ್ ಗುನ್ಯಾ ಜ್ವರದ ಬಗ್ಗೆ,ಮಲೇರಿಯಾ ಜ್ವರದ ಬಗ್ಗೆ ಕರಪತ್ರಗಳನ್ನು ಹಂಚುವುದರ ಮೂಲಕ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡಲಾಯಿತು. ಮತ್ತು ಮಳೆಗಾಲದ ಮುಂಜಾಗ್ರತೆ ಕುರಿತು ಆರೋಗ್ಯ ಶಿಕ್ಷಣವನ್ನೂ ನೀಡಲಾಯಿತು. ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗಳಾದ ವಿಶ್ವಜ್ಞಾ ರವರು ಬೇಟಿ ನೀಡಿ ಪರಿಶೀಲಿಸಿ ಮೇಲ್ವಿಚಾರಣೆ ನಡೆಸಿದರು.
RRT ಲಾರ್ವಾ ಸರ್ವೇಕ್ಷಣೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳುಆಶಾ ಕಾರ್ಯಕರ್ತೆಯವರುಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!