ಅವ್ಯವಸ್ಥೆ
ತಾವರೆಕೆರೆ ಬಳಿ ಹೆಚ್ಚಿದ ದಟ್ಟಣೆ, ಪಾರ್ಕಿಂಗ್ ಸಮಸ್ಯೆ: ಕೆರೆಗೆ ಇಳಿಯುವ ಮೂಲಕ ಅಪಾಯಕ್ಕೆ ಆಹ್ವಾನ
ಹೆದ್ದಾರಿ ಬದಿ ನಿಲುಗಡೆಗೊಳ್ಳುತ್ತಿರುವ ಪ್ರವಾಸಿಗರ ವಾಹನಗಳಿಂದ ಸುಗಮ ಸಂಚಾರಕ್ಕೆ ಅಡ್ಡಿ


ಕುಶಾಲನಗರ, ಜು 01: ಮಡಿಕೇರಿ-ಕುಶಾಲನಗರ ಹೆದ್ದಾರಿ ಬದಿಯ ತಾವರೆಕೆರೆಯಲ್ಲಿ ಅರಳಿರುವ ಬಣ್ಣದ ಹೂಗಳನ್ನು ನೋಡಲು ಆಗಮಿಸುವವರ ಸಂಖ್ಯೆ ಹೆಚ್ಚಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ. ಅಪಾಯಕಾರಿ ತಿರುವಿನಲ್ಲಿ ವಾಹನಗಳು ನಿಲುಗಡೆಗೊಳ್ಳುತ್ತಿದೆ. ಇದರಿಂದ ಸಂಚಾರ ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಇದಲ್ಲದೆ ಹೂಗಳನ್ನು ಹತ್ತಿರದಿಂದ ನೋಡಲು ಸೆಲ್ಫಿ ತೆಗೆಯಲು ತಡೆಗೋಡೆ ದಾಟಿ ನೇರವಾಗಿ ಕೆರೆಗೆ ಇಳಿಯುತ್ತಿರುವ ಕಾರಣ ಅನಾಹುತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಜೀವಹಾನಿ ಸಂಭವಿಸುವ ಮುನ್ನ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕಿದೆ. ಹೆಚ್ಚಾದ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ನಿರ್ವಹಣೆಗೆ ಸೂಕ್ತ ಕ್ರಮವಹಿಸುವಂತೆ ಸಾರ್ವಜನಿಕರು, ಸ್ಥಳೀಯ ಉದ್ಯಮಿಗಳು ಒತ್ತಾಯಿಸಿದ್ದಾರೆ.