ಕುಶಾಲನಗರ, ಜು 01: ಕುಶಾಲನಗರ ತಾಲೂಕಿನ ಹಾರಂಗಿ ಗ್ರಾಮದ ಡ್ಯಾಮ್ ಮುಂಭಾಗದ ಬಸ್ ನಿಲ್ದಾಣಕ್ಕೆ ಸಾರಿಗೆ ಬಸ್ ಬರುತ್ತಿಲ್ಲ ಎಂಬ ಆರೋಪಿಸಿ ಶಾಲಾ ಮಕ್ಕಳು, ಗ್ರಾಮಸ್ಥರು ಜನಪ್ರತಿನಿಧಿಗಳು ಒಟ್ಟಾಗಿ ಕೆಎಸ್ಆರ್ಟಿಸಿ ಬಸ್ ತಡೆದು ಪ್ರತಿಭಟನೆ ಮಾಡಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಹಾರಂಗಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು ಬಸ್ ಸಂಚಾರಕ್ಕೆ ಕೇವಲ 300 ಮೀಟರ್ ದೂರದಲ್ಲಿ ಬದಲಿ ರಸ್ತೆ ಇದ್ದರೂ ಕೂಡ ಬಸ್ ಚಾಲಕ ಹೋಗುವುದಿಲ್ಲ. ಇದರಿಂದಾಗಿ ಡ್ಯಾಮ್ ಮುಂಭಾಗದ ಬಸ್ ನಿಲ್ದಾಣಕ್ಕೆ 1 ರಿಂದ 2 ಕಿಲೋಮೀಟರ್ ದೂರದಿಂದ ನಡೆದುಕೊಂಡು ಬರುವ ಯಡವನಾಡು ಮತ್ತು ಹುದುಗೂರು ಗ್ರಾಮದ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಮತ್ತು ಹಾರಂಗಿ ಗ್ರಾಮದ ಶಾಲಾ ಕಾಲೇಜಿನ ಮಕ್ಕಳು ಬಸ್ಸಿಗಾಗಿ ಮತ್ತೆ 1 ಕಿಲೋಮೀಟರ್ ನಷ್ಟು ನಡಿಯುವಂತಾಗಿದೆ. ಈ ಬಗ್ಗೆ ಈಗಾಗಲೇ ಕುಶಾಲನಗರದ ಬಸ್ ನಿಲ್ದಾಣದ ವ್ಯವಸ್ಥಾಪಕರಿಗೆ, ಕೆಎಸ್ಆರ್ಟಿಸಿ ಡಿಪೋ ಮೆನೇಜರ್ ಗೂ ಕೂಡ ಹಿಂದೆ ಹಲವು ಬಾರಿ ದೂರು ನೀಡಿದರೂ ಸಹ ಹೀಗೆ ಮುಂದುವರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಇವತ್ತು ಬಸ್ಸನ್ನು ತಡೆದು ಪ್ರತಿಭಟನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರಿಪಡಿಸದೆ ಹೋದಲ್ಲಿ ಶಾಲಾ ಮಕ್ಕಳು ಗ್ರಾಮಸ್ಥರು ಸೇರಿ ಉಗ್ರ ಪ್ರತಿಭಟನೆ ಮಾಡುವುದಾಗಿ ಕೆಎಸ್ಆರ್ಟಿಸಿ ನಿಗಮದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭ ಶಾಲಾ ಕಾಲೇಜಿನ ಮಕ್ಕಳು ಗ್ರಾಮಸ್ಥರಾದ ಅಪ್ಪಾಜಿ, ರಘು,ರಾಜ, ವೇಲನ್, ಸತೀಶ್,ಮಂಜು ಉಪಸ್ಥಿತರಿದ್ದರು
Back to top button
error: Content is protected !!