ಕುಶಾಲನಗರ, ಜೂ. 30. ಹೆಬ್ಬಾಲೆ ಪ್ರೌಢಶಾಲೆಯ ವಿದ್ಯಾವರ್ಧಕ ಸಂಘದ ವತಿಯಿಂದ ಸಿದ್ದಲಿಂಗಪುರ ಗ್ರಾಮದ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉದ್ಯಮಿಗಳು ಹೆಬ್ಬಾಲೆ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳಾಗಿ, ಸ್ವಂತ ಹಣದಿಂದ ಈಗಾಗಲೇ ಶಾಲೆಗೆ ರೂ 10ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿರುತ್ತಾರೆ. ಜೊತೆಯಲ್ಲಿ ಶಾಲೆಯ ಮೇಲ್ಚಾವಣಿ ಮತ್ತು ಸ್ಮಾರ್ಟ್ ಕ್ಲಾಸ್ ತರಗತಿಗೆ ಸಂಬಂಧಿಸಿದ ಕಾಮಗಾರಿಗೆ ಹಣಕಾಸು ವ್ಯವಸ್ಥೆ ಮಾಡುವ ಮೂಲಕ ಸ್ವಂತ ಹಣದಿಂದ ಎರಡೂ ಕಾಮಗಾರಿ ಕೆಲಸವನ್ನು ಆರಂಭಿಸಿದ್ದಾರೆ.
ಅಪಾರ ಪ್ರಮಾಣದ ವೈಯಕ್ತಿಕ ಹಣಕಾಸು ವ್ಯವಸ್ಥೆಗೆ ಸಹಕಾರ ನೀಡಿರುವುದರ ಜೊತೆಯಲ್ಲಿ ವಿದ್ಯಾರ್ಜನೆ ಸಹಕಾರ ನೀಡುತ್ತಿರುವ ಉದ್ಯಮಿಗಳ ಸೇವೆ ಪರಿಗಣಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಕಾರ್ಯದರ್ಶಿ, ನಿರ್ದೇಶಕರು, ಸಂಸ್ಥೆಯ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು, ಶಿಕ್ಷಕರು ಹಾಜರಿದ್ದರು.
Back to top button
error: Content is protected !!