ಧಾರ್ಮಿಕ

ಕುಶಾಲನಗರದಲ್ಲಿ ತ್ಯಾಗ ಬಲಿದಾನದ ಬಕ್ರೀದ್ ಹಬ್ಬ ಆಚರಣೆ

ಕುಶಾಲನಗರ,ಜೂ೭: ಮುಸಲ್ಮಾನರ ಪವಿತ್ರ ಎರಡು ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ಕುಶಾಲನಗರದ ಪ್ರಮುಖ ಮಸೀದಿಗಳಲ್ಲಿ ಆಚರಿಸಲಾಯಿತು.
ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದ್ದು, ಕುಶಾಲನಗರದ ಶಾಫಿ ಹಾಗೂ ಹನಫಿ ಬಾಂಧವರು ಮದೀಸಿಗಳಲ್ಲಿ ಬಕ್ರೀದ್ ನ‌ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು. ನಂತರ ನಾಡಿನಲ್ಲಿ ಸರ್ವ ಸಮುದಾಯದವರು ಶಾಂತಿ, ಸಮಾಧಾನದಿಂದಿರಲು ಹಾಗೂ ಬೆಳೆ,‌ ಮಳೆಯಾಗಲು ಪ್ರಾರ್ಥಿಸಲಾಯಿತು. ನಂತರ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಸಾಹೋದರ್ಯತೆಯ ಸಂದೇಶವನ್ನು ಸಾರಿದರು.
ಈ ಸಂದರ್ಭ ಹಿಲಾಲ್ ಮಸೀದಿಯ ಧರ್ಮಗಳು, ದಾರುಲ್ ಉಲೂಂ ಮದ್ರಸ ಪ್ರಾಂಶುಪಾಲ ತಮ್ಲೀಕ್ ದಾರಿಮಿ, ದಾರುಲ್ ಉಲೂಂ ಮದ್ರಸದ ಅಧ್ಯಕ್ಷ ಹುಸೇನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಬಕ್ರೀದ್ ಹಬ್ಬದ ಹಿನ್ನಲೆ ಬಗ್ಗೆ ವಿವರಿಸಿ ಹಬ್ಬದ ಸಂದೇಶ ಸಾರಿದಿರು.‌
ಕುಶಾಲನಗರದ ಹಿಲಾಲ್ ಮಸೀದಿ, ಜಾಮಿಯಾ ಮಸೀದಿ, ನೂರೇ‌ ಮದೀನ, ಕೂಡಿಗೆ, ನಂಜರಾಯಪಟ್ಟ ಸೇರಿದಂತೆ ಸಮೀಪದ ಮಸೀದಿಗಳಲ್ಲಿ ಬಕ್ರೀದ್ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು.
ಈ ಸಂದರ್ಭ ಆಯಾ ಭಾಗದ ಕಮಿಟಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!