ಮಳೆ

ಚಿಕ್ಲಿಹೊಳೆ-ಮಾವಿನಹಳ್ಳ‌ ನಡುವೆ ಕಿರು ಸೇತುವೆ ತಡೆಗೋಡೆ ಕುಸಿತ: ಪರಿಶೀಲನೆ

ಕುಶಾಲನಗರ, ಮೇ 26: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಮಾವಿನಹಳ್ಳ ಹಾಡಿಗೆ ಹೋಗುವ ಕಿರು ಸೇತುವೆ ತಡೆಗೋಡೆಯು ಭಾರಿ ಮಳೆ ಗಾಳಿಗೆ ಒಂದು ಭಾಗ ಸಂಪೂರ್ಣ ಕುಸಿದಿದೆ. ಇದರಿಂದ ಈ ಭಾಗದ ಹಾಡಿ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ದಿನನಿತ್ಯ ಆತಂಕದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಸದರಿ‌ ಸ್ಥಳಕ್ಕೆ ತಹಸೀಲ್ದಾರ್ ಕಿರಣ್ ಗೌರಯ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ  ಸಿ. ಎಲ್‌. ವಿಶ್ವ ಗ್ರಾ.ಪಂ.ಸದಸ್ಯರುಗಳಾದ ಆರ್.ಕೆ.ಚಂದ್ರ, ಮಾವಾಜಿ ರಕ್ಷಿತ್‌, ಗಿರಿಜಮ್ಮ,ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಫಯಾಜ್‌ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!