ಕುಶಾಲನಗರ, ಮೇ 26: ಗೊಂದಿಬಸವನಹಳ್ಳಿ ಗ್ರಾಮದ ರೊಂಡಕೆರೆ ಏರಿ ಒಡೆಯುವ ಭೀತಿ ಎದುರಾಗಿದೆ. ಕಳೆದ ಮಳೆಗಾಲದಲ್ಲಿ ಕೆರೆ ಏರಿ ಒಡೆದು ಅನಾಹುತ ಸೃಷ್ಠಿ ಯಾಗಿತ್ತು. ತಾತ್ಕಾಲಿಕವಾಗಿ ಮಣ್ಣು ತುಂಬಿ ಒಡೆದ ಸ್ಥಳ ಮುಚ್ಚಲಾಗಿತ್ತು. ಇದೀಗ ಮಳೆಗೆ ಮಣ್ಣು ಸಡಿಲಗೊಂಡು ಅಲ್ಲಲ್ಲಿ ಬಿರುಕು ಕಾಣಿಸಿಕೊಳ್ಳತೊಡಗಿದೆ. ಕೆರೆಯಲ್ಲಿ ನೀರು ತುಂಬುತ್ತಿದ್ದು ಏರಿ ಒಡೆದರೆ ಒಮ್ಮೆಲೆ ನೀರು ಹೊರಬರುವ ಕಾರಣ ಕೆಳ ಪ್ರದೇಶಗಳು ಜಲಾವೃತಗೊಳ್ಳಲಿದೆ.
Back to top button
error: Content is protected !!