ಕುಶಾಲನಗರ, ಮೇ 12: ಸೋಮವಾರಪೇಟೆ ಕಕ್ಕೆಹೊಳೆ ನಿವಾಸಿ ಗುತ್ತಿಗೆದಾರ ಸಂಪತ್ ನಾಯರ್ (44) ಕಳೆದ ಶುಕ್ರವಾರ ನಿಗೂಢವಾಗಿ ನಾಪತ್ತೆಯಾದವರು ಇದುವರೆಗೆ ಪತ್ತೆಯಾಗಿಲ್ಲ.
ಇವರು ತನ್ನ ಸ್ನೇಹಿತ ಕುಶಾಲನಗರ ಮಾದಾಪಟ್ಟಣದ ಖಾಸಗಿ ಹೋಂಸ್ಟೇ ವ್ಯವಸ್ಥಾಪಕರ ಫೊರ್ಡ್ ಪುಂಟೋ ಕಾರನ್ನು ಪಡೆದ ಸಂಪತ್ ಸೋಮವಾರಪೇಟೆ ಗೆ ತೆರಳಿದ್ದರು ಎನ್ನಲಾಗಿದೆ. ನಂತರ ಅವರು ತೆರಳಿದ ಕಾರು ಯಸಳೂರು ಮಾಗೇರಿ ಎಂಬಲ್ಲಿ ಅನಾಥವಾಗಿ ಪತ್ತೆಯಾಗಿದೆ. ಹೋಂಸ್ಟೇ ವ್ಯವಸ್ಥಾಪಕ ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದು ಇದುವರೆಗೆ ಸಂಪತ್ ಅವರ ಸುಳಿವು ಪತ್ತೆಯಾಗಿಲ್ಲ. ಈ ಹಿಂದೆ ಇವರ ವಿರುದ್ದ ದಾಖಲಾಗಿದ್ದ ವಿವಾಹಿತ ಮಹಿಳೆಯೊಬ್ಬರ ಅಪಹರಣ ಪ್ರಕರಣ ಇವರ ನಾಪತ್ತೆಗೆ ತಳುಕು ಹಾಕಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Back to top button
error: Content is protected !!