ಕುಶಾಲನಗರ, ಮೇ 11: ನಗರದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಸಮೀಪ ಶನಿವಾರ ನೂತನವಾಗಿ ಪ್ರಾರಂಭವಾದ ಇಂದಿರಾ ಕ್ಯಾಂಟೀನ್ ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ನಿರೀಕ್ಷೆಗೆ ಮೀರಿದ ಜನ ಭಾನುವಾರ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ “ನಾ ಮುಂದು, ತಾ ಮುಂದು”- ಎಂಬಂತೆ ಕ್ಯಾಂಟೀನ್ ಗೆ ಭೇಟಿ ಕೊಟ್ಟು ಟೋಕನ್ ಪಡೆದು ಉಪಹಾರ ಮತ್ತು ಊಟಗಳ ರುಚಿ ಸವಿದರು ಎಂದು ಕ್ಯಾಂಟೀನ್ ಕಾರ್ಯಾಚರಣೆ ವ್ಯವಸ್ಥಾಪಕ ಅಮಿತ್ ಮೋರೆ ಹೇಳಿದರು.
ಕುಶಲನಗರದ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ ಗ್ರಾಹಕರ ಸ್ಪಂದನೆ ಬಗ್ಗೆ, ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ, ಪ್ರತಿದಿನದ ಬೆಳಗಿನ ಉಪಹಾರ 300 ಜನರಿಗೆ ಅದೇ ರೀತಿ ಮಧ್ಯಾಹ್ನದ- ರಾತ್ರಿಯ ಊಟ 300+ 300 ಜನರಿಗೆ ಒಟ್ಟು ದಿನವೊಂದಕ್ಕೆ 900 ಜನ ಗ್ರಾಹಕರಿಗೆ ಮಾತ್ರ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ನೀಡುತ್ತೇವೆ. ಭಾನುವಾರ ಬೆಳಿಗ್ಗೆ ಉಪ್ಪಿಟ್ಟು- ಕೇಸರಿಬಾತ್, ಅಥವಾ ಮೂರು ಇಡ್ಲಿ ಸಾಂಬಾರ್ ಉಪಹಾರಕ್ಕೆ ನೀಡಿದ್ದೇವೆ. ಅದೇ ರೀತಿ ಮಧ್ಯಾನದ ಊಟಕ್ಕೆ ಅನ್ನ, ಮು ದ್ದೆ,ಸಾಂಬಾರ್ ಜೊತೆಗೆ ಸೇಮ್ಯ ಕೀರ್ ನೀಡಿದ್ದೇವೆ. ಗ್ರಾಹಕರು ಸಂತೃಪ್ತಿ ಮನೋಭಾವದಿಂದ ನಮಗೆ ಸಹಕರಿಸಿ, ನಾವು ಕೊಟ್ಟ ಆಹಾರವನ್ನು ಸ್ವೀಕರಿಸಿದ್ದಾರೆ ಎಂದರು. ನಮಗೆ ಇರುವ ಸರ್ಕಾರದ ನಿರ್ದೇಶನದಂತೆ ವರ್ಷದ 365 ದಿನಗಳು ಯಾವುದೇ ರಜೆ ಇಲ್ಲದಂತೆ ನಿರಂತರವಾಗಿ ಸಾರ್ವಜನಿಕ ಸೇವೆಗೆ ದಿನದಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಗಳು ಸೇರಿದಂತೆ ಮೂರು ಹೊತ್ತು ಶುಚಿಯಾದ ರುಚಿಯಾದ ಆಹಾರವನ್ನು ಗ್ರಾಹಕರಿಗೆ ನೀಡುತ್ತೇವೆ ಎಂದರು. ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬಂದಿದೆಯಾದರೂ ಸರ್ಕಾರದ ನಿಯಮದಂತೆ ನಾವು ಗ್ರಾಹಕರಿಗೆ ಪ್ರತಿ ಹೊತ್ತಿಗೆ 300 ಗ್ರಾಹಕರಿಗೆ ಮಾತ್ರ ನೀಡುತ್ತೇವೆ, ಸರ್ಕಾರದ ನಿಯಮಾವಳಿಗಳು ಬದಲಾದರೆ ಗ್ರಾಹಕರ ಇನ್ನು ಹೆಚ್ಚಿನ ಬೇಡಿಕೆ ಪೂರೈಸಲು ಪ್ರಯತ್ನಿಸುತ್ತೇವೆ ಎಂದರು.
Back to top button
error: Content is protected !!